‘ಅವಳು ಸ್ತ್ರೀ ಸಂವೇದೀ ಮಾತು- ಕತೆಗಳು’ ಮೀರಾ ಪಿ. ಆರ್ ಹಾಗೂ ಪೂರ್ಣಿಮಾ ಕಶ್ಯಪ್ ಅವರು ಸಂಪಾದಿಸಿರುವ ಕತೆ ಮತ್ತು ಲೇಖನ ಸಂಕಲನವಾಗಿದೆ. ಇದಕ್ಕೆ ಎಚ್. ಎಸ್. ಶ್ರೀಮತಿ ಅವರ ಬೆನ್ನುಡಿ ಬರಹವಿದೆ; ಹೆಣ್ಣು ಬದುಕನ್ನು ಅರ್ಥ ಮಾಡಿಕೊಳ್ಳುವ, ಅವಳ ಬದುಕು ಎದುರಿಸುತ್ತಿರುವ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಆರಂಭವಾದ ಸ್ತ್ರೀವಾದೀ ಚಿಂತನೆ ಹಾಗೂ ಹೋರಾಟಗಳು ಮೊದಮೊದಲಲ್ಲಿ ಹೆಣ್ಣುಬದುಕಿನ ಎಲ್ಲ ಕಷ್ಟಗಳಿಗೂ ಪುರುಷರೇ ಕಾರಣ ಎಂದು ತಿಳಿದದ್ದು ಹೌದು. ಸ್ತ್ರೀವಾದವು ಮಾಗುತ್ತಾ ಬಂದಂತೆ ಇಂದು ಮಹಿಳೆಯರಂತೆಯೇ ಪುರುಷರು ಕೂಡಾ ಈ ಪಿತೃಪ್ರದಾನ ವ್ಯವಸ್ಥೆಯ ಆಟದಲ್ಲಿ ಉರುಳುವ ದಾಳಕ್ಕೆ ತಕ್ಕಂತ ನಡೆಯುವ ಕಾಯಿಗಳಷ್ಟೇ ಎಂಬುದನ್ನು ಮನಗಂಡಿದೆ. ಈ ಅರಿವನ್ನು ದೃಢೀಕರಿಸುವ ಒಂದು ಹಾದಿಯಾಗಿ, ಈ ಚಿಂತನೆಯು ಪಿತೃಪ್ರಧಾನ ವ್ಯವಸ್ಥೆಯು ತನ್ನ ಸಾಂಸ್ಥಿಕ ರಚನೆಗಳಲ್ಲಿ. ಹಾಗೂ ಜ್ಞಾನವಲಯಗಳಲ್ಲಿ ಹುದುಗಿಸಿಟ್ಟಿರುವ ನಿಯಮಾವಳಿಗಳು, ಹಾಗೂ ಮಿಥ್ ಗಳನ್ನು ಮರುಶೋಧನೆಗೆ ಒಳಪಡಿಸುತ್ತದೆ ಎಂಬುದನ್ನು ಈ ಪುಸ್ತಕದಲ್ಲಿ ನೋಡಬಹುದು ಎಂದಿದ್ದಾರೆ.
©2024 Book Brahma Private Limited.