‘ಶಿಲ್ಪಸಿದ್ಧಾಂತಿ ಶ್ರೀಸಿದ್ಧಲಿಂಗಸ್ವಾಮಿಗಳು’ ಕಲಾವಿದ ಲೇಖಕ ಎನ್. ಮರಿಶಾಮಾಚಾರ್ ಅವರ ಸಂಪಾದಿತ ಕೃತಿ. ಕಲಾಗುರು ಶ್ರೀ ಸಿದ್ಧಲಿಂಗಸ್ವಾಮಿ ಅವರ ಕಲಾಬದುಕು ಮತ್ತು ಸಾಧನೆಗಳ ಕುರಿತ ಮಹತ್ವದ ಲೇಖನಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ.
ಕಲಾವಿದ ಎಲ್. ಶಿವಲಿಂಗಪ್ಪ ಅವರ ಶಿಲ್ಪ ಸಿದ್ಧಾಂತಿ ಶ್ರೀ ಸಿದ್ಧಲಿಂಗ ಸ್ವಾಮಿಗಳವರು, ಕೆ.ಸಿ. ಪುಟ್ಟಣ್ಣಾಚಾರ್ ಅವರ ನನ್ನ ಗುರುಗಳ ಸನ್ನಿಧಿಯಲ್ಲಿ, ಸಿ. ಪರಮೇಶ್ವರಾಚಾರ್ ಅವರ ನಾನು ಕಂಡಂತೆ ನನ್ನ ಗುರುಗುಳು ಹಾಗೂ ಎನ್. ಮರಿಶಾಮಾಚಾರ್ ಅವರ ಬಹುಮುಖ ಪ್ರತಿಭೆಯ ಕಲಾವಿದ ಎಂಬ ನಾಲ್ಕು ಮಹತ್ವದ ಲೇಖನಗಳು ಸಂಕಲನಗೊಂಡಿವೆ.
ಕರ್ನಾಟಕದ ಕಲಾವಲಯದ ಹಿರಿಯರು ’ಮರಿ’ ಎಂದು ಕರೆಯುತ್ತಿದ್ದ ಎನ್. ಮರಿಶಾಮಾಚಾರ್ ಅವರು ರಾಜ್ಯದ ಅಪರೂಪದ ಕಲಾಪರಿಚಾರಕ-ಲೇಖಕ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ರಿಜಿಸ್ಟ್ರಾರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದ ಮರಿಶಾಮಾಚಾರ್ ಅವರು ಕಲಾಸಾಹಿತಿ. ’ನಡೆದಾಡುವ ಕಲಾಕೋಶ’ ಎಂದು ಕಲಾವಲಯದಲ್ಲಿ ಅವರನ್ನು ಗುರುತಿಸಲಾಗುತ್ತಿತ್ತು. ವಿಜಯಪುರದಲ್ಲಿ 1951ರ ಮೇ 15ರಂದು ಜನಿಸಿದ ಮರಿಶಾಮಾಚಾರ್ ಅವರು ಜಯನಗರದ ಆರ್.ವಿ. ಹೈಸ್ಕೂಲಿನಲ್ಲಿ ಓದುತ್ತಿರುವಾಗ ಡ್ರಾಯಿಂಗ್ ಮಾಡಲು ಆರಂಭಿಸಿದ್ದರು. ಅವರ ಅಣ್ಣ ಕೆನ್ ಶಾಲೆಯ ವಿದ್ಯಾರ್ಥಿಯಾಗಿದ್ದ. ಕಲೆಯ ಅಭಿರುಚಿ ಬಂದದ್ದು ಅವರ ಅಣ್ಣನಿಂದಲೇ. ಅಣ್ಣನ ಮೂಲಕ ಪರಿಚಯವಾದ ಕಲಾಗುರು ಆರ್.ಎಂ. ಹಡಪದ ಅವರ ಶಿಷ್ಯರಾಗಿದ್ದ ’ಮರಿ’ ಅವರು ಅವರ ಬಳಿ ಐದು ವರ್ಷ ...
READ MORE