ಕವಿ ಎ ಎಸ್. ಮಕಾನದಾರ ಅವರ ಸಂಪಾದನೆಯಲ್ಲಿ ಪ್ರಕಟಣೆಗೊಂಡ `ಮನುಷ್ಯ ಪ್ರೇಮ ಕದ ತೆರೆಯುವ ಹೊತ್ತಿಗೆ' ಯಲ್ಲಿ ಹಿರಿಯ ಸಾಹಿತಿಗಳಾದ ಪ್ರೊ..ಬರಗೂರು ರಾಮಚಂದ್ರಪ್ಪ, ಪ್ರೊ. ಚಂದ್ರಶೇಖರ ಪಾಟೀಲ್, ಗೌರಿ ಲಂಕೇಶ್, ಡಾ. ರಹಮತ್ ತರೀಕೆರೆ, ಬಿ ಟಿ ಲಲಿತ ನಾಯಕ, ರಂಜಾನ್ ದರ್ಗಾ, ಕೋ ಚನ್ನಬಸಪ್ಪ (ಕೋಚೆ), ಡಾ ಶಾಮ ಸುಂದರ ಬಿದರಕುಂದಿ, ಡಾ ಸಬಿಹಾ ಭೂಮಿ ಗೌಡ, ಬಾನು ಮುಸ್ತಾಕ್, ಆನಂದ ಝoಜರವಾಡ, ಬಿ ಎಂ ಹನೀಫ್, ಎಂ ಡಿ ಗೋಗೇರಿ, ಡಾ. ಅರ್ಜುನ್ ಗೊಳಸಂಗಿ, ಪ್ರೂ.ಅಬ್ಬಾಸ್ ಮೇಲಿನ ಮನಿ, ಆನಂದ ಋಗ್ವೇದಿ, ಜ್ಞಾನ ದೇವ ದೊಡ್ಡಮೇಟಿ, ಪ್ರೊ.ಅಲ್ಲಮ ಪ್ರಭು ಬೆಟದೂರು, ಪತ್ರಕರ್ತ ಗೋಪಾಲ್ ಕೃಷ್ಣ ಹೆಗಡೆ, ಸನ್ಮಾರ್ಗಪತ್ರಿಕೆ ಸಂಪಾದಕ ಇಬ್ರಾಹಿಂ ಸಈದ, ಜರಗನ ಹಳ್ಳಿ ಶಿವಶಂಕರ ಹೀಗೆ 31 ಜನ ಕರ್ನಾಟಕದ ಅನೇಕ ಹಿರಿಯ ಲೇಖಕರ ಲೇಖನಗಳಿಂದ ಸೌಹಾರ್ದ ಸಂಸ್ಕೃತಿ ಪ್ರತಿ ಬಿಂಬಿಸುವಲ್ಲಿ ಈ ಸಂಕಲನ ಸಫಲವಾಗಿದೆ.
ಎ ಎಸ್ ಮಕಾನದಾರ ಅವರು ಪ್ರಗತಿ ಪರ ಸಂಘಟನೆಯಲ್ಲಿದ್ದುಕೊಂಡು ಸಾಮಾಜಿಕ ಅನಿಷ್ಟ ಗಳ ವಿರುದ್ಧ ಗಟ್ಟಿ ಧ್ವನಿಯಾಗಿ ಬೆಳೆದಿರುವರು. ವಿಶ್ವ ಭ್ರಾತೃತತ್ವದ ಸೂಫಿ ದೂದ್ ಪೀರಾ ಕೃತಿಗೆ ಸಂಬಂಧಿಸಿದಂತೆ ನಾಡಿನ ಪ್ರಗತಿ ಪರ ಮನಸುಗಳು ವ್ಯಕ್ತಪಡಿಸಿದ ಗಂಭೀರ ಅಭಿಪ್ರಾಯ ಗಳನ್ನು ಸಂಗ್ರಹಣೆ ಮಾಡಿ ಮುಚ್ಚಿಕೊಂಡಿರುವ ಮನುಷ್ಯನ ಮನಸ್ಸಿನ ಬಾಗಿಲನ್ನು ಪ್ರೇಮ ದ ಮೂಲಕ ಭ್ರಾತೃತ್ವದ ಮೂಲಕ ತೆರೆಯುತ್ತಿರುವ ಮಕಾನದಾರ ಅವರು, ಬತ್ತುತ್ತಿರುವ ಮನುಷ್ಯ ಪ್ರೀತಿಯ ಒರತೆ ಯನ್ನು ಇಂತಹ ಕೆಲಸದ ಮೂಲಕ ಹಸಿ ಹಸಿಯಾಗಿ ಇಡಲೆಂದು ಹಿರಿಯ ಬರಹ ಗಾರ್ತಿ ಡಾ. ಮಲ್ಲಿಕಾ ಘಂಟಿ ಅವರು ಮುನ್ನುಡಿ ಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
©2024 Book Brahma Private Limited.