ರಾಜಶೇಖರ ಜಮದಂಡಿ
(30 July 1969)
ಡಾ. ರಾಜಶೇಖರ ಜಮದಂಡಿ ಮೂಲತಃ ಹೊಸಪೇಟೆಯವರು. 30-07-1969 ರಂದು ಜನನ. ತಂದೆ ದಿ: ಜೆ. ಬಸವರಾಜ ತಾಯಿ ಜೆ. ಅನ್ನಪೂರ್ಣಮ್ಮ. ಗುಲಬರ್ಗಾ ವಿ.ವಿ.ಯಿಂದ ಎಂ.ಎ. (1994) ಹಾಗೂ ಕನ್ನಡ ವಿ.ವಿ.ಯಿಂದ ಜಾನಪದ ವಿಷಯವಾಗಿ (1997) ಎಂ.ಫಿಲ್ ಹಾಗೂ ಪಿಎಚ್ ಡಿ (2002) ಪಡೆದಿದ್ದಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಅಧ್ಯಯನ ಜನಪದ ಕಲಿಕಾ ಕೇಂದ್ರದಲ್ಲಿ ವಿವಿಧ ಸೇವೆ, ಬಳ್ಳಾರಿ ಶ್ರೀಕೃಷ್ಣದೇವರಾಯ (2017-18) ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಕೊಪ್ಪಳದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ, ಮೈಸೂರಿನ (2018) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಸಹ ಸಂಶೋಧಕರಾಗಿದ್ದರು. ಕೃತಿಗಳು: ಅಂಗಳ(ಕವನ ಸಂಕಲನ), ಸರ್ವಜ್ಞನ ವಚನಗಳು ಒಂದು ಜಾನಪದೀಯ ಅಧ್ಯಯನ (ಪಿ.ಹೆಚ್‍ಡಿ ಮಹಾಪ್ರಬಂಧ) , ಚಿಂತನಾಂಜಲಿ(ಚಿಂತನ ಲೇಖನಗಳು), ಸಮರ್ಪಣೆ (ಸಹೋದರನೊಂದಿಗೆ) (ಭಕ್ತಿಗೀತೆಗಳು), ನಿಸ್ಸೀಮ ...
READ MORE