ವೈದಿಕ-ಅವೈದಿಕ ದರ್ಶನಗಳ ಕುರಿತು ಪ್ರಾಚೀನ ಭಾರತಿಯ ವಾಗ್ವಾದಗಳನ್ನು ಆಧರಿಸಿ ವಿವಿಧ ಚಿಂತಕರ ಬರಹಗಳ ಸಂಗ್ರಹ ಕೃತಿ ಇದು. ಲೇಖಕಿ ಪ್ರಜ್ಞಾ ಶಾಸ್ತ್ರಿ ಸಂಪಾದಿಸಿದ್ದಾರೆ.
ಚಿಂತಕರಾದ ವಿದ್ವಾನ್ ಎನ್. ರಂಗನಾಥ ಶಾಸ್ತ್ರೀ, ಡಿ.ಆರ್. ನಾಗರಾಜ, ಎಂ. ರಾಜಗೋಪಾಲ ಆಚಾರ್ಯ, ಪ್ರಭಾಕರ ಜೋಷಿ, ಶ್ರೀಪತಿ ತಂತ್ರಿ, ರಾಜನ್ ಗುರುಕ್ಕಳ್, ಅವಧಾನಿ ಅಶ್ವತ್ಥನಾರಾಯಣ ಮತ್ತೂರು ವಿಷಯಾಧರಿಸಿ ಚಿಂತನೆಗಳನ್ನು ವ್ಯಕ್ತಪಡಿಸಿದ್ದಾರೆ. ಚಿಂತಕ ಮನು ದೇವ ದೇವನ್ ಅವರು ಸಂವಾದದಲ್ಲಿ ಪ್ರತಿಕ್ರಿಯಿಸಿದ್ದಾರೆ. ಪ್ರಾಚೀನ ಕಾಲದಿಂದ ನಡೆದ ವಾದ-ವಾಗ್ವಾದಗಳು ಕೆಲವೆಡೆ ಅವರವರ ಭಾವಕ್ಕೆ ಸೀಮಿತವಾಗಿದ್ದರೆ ಮತ್ತೊಂದೆಡೆ ಗುಂಪು ಅಭಿಪ್ರಾಯಗಳನ್ನು ಬೆಂಬಲಿಸಿವೆ. ಇಂತಹ ಎಲ್ಲ ಚಿಂತನೆಗಳನ್ನು ಒಂದೆಡೆ ನೀಡಿದ್ದು, ಹೊಸದೊಂದು ಚರ್ಚೆಯನ್ನು ಹುಟ್ಟು ಹಾಕುವ ಆರೋಗ್ಯಕರ ಕೃತಿ ಇದು.
©2024 Book Brahma Private Limited.