ಖ್ಯಾತ ಲೇಖಕ ಪಾ.ಶ. ಶ್ರೀನಿವಾಸ ಅವರ ಕೃತಿ-ತಿರುಕ್ಕುರಳ್ . ತೆಲುಗು ಭಾಷೆಗೆ ವೇಮನ, ಕನ್ನಡ ಸಾಹಿತ್ಯದಲ್ಲಿ ಸರ್ವಜ್ಞ ಇದ್ದ ಹಾಗೆ ತಮಿಳು ನಾಡಿಗೆ ತಿರುವಳ್ಳುವರ್ ಎಂಬ ತತ್ವಜ್ಞಾನಿ ಇದ್ದು, ಇವರ ವಿಚಾರಧಾರೆಗಳು ಒಂದೇ ತೆರನಾಗಿವೆ. ಆತ ಬರೆದ ಕೃತಿ ತಿರುಕ್ಕುರಳ್. ಕಿರಿದಾದ ಶಬ್ದಗಳಲ್ಲಿ ಹಿರಿದಾದ ಅರ್ಥವನ್ನು ತುಂಬಿಸಿ ಸಾಹಿತ್ಯ ರಚಿಸುವುದು ಇವರ ವಿಶೇಷ. ಯಾವ ದಾಕ್ಷಿಣ್ಯಕ್ಕೂ ಒಳಗಾದವರಲ್ಲ. ನೇರವಾಗಿ ಸತ್ಯವನ್ನು ಹೇಳಿ ಬಿಡುವುದು ಇವರ ಸಾಹಿತ್ಯದ ಆಕರ್ಷಣೆ. ಈತನದು ಮೂರನೇ ಶತಮಾನ ಎಂದು ಹೇಳಲಾಗುತ್ತಿದೆ. ತಿರುಕ್ಕುರಳ್ ಕೃತಿಯ ಕವನಗಳನ್ನು ಸಂಪಾದಿಸಿ, ಆ ಕೃತಿಯ ವಿಶೇಷತೆಯನ್ನು ಕಟ್ಟಿಕೊಡುವ ಕೃತಿ ಇದು.
ಪಾ.ಶ. ಶ್ರೀನಿವಾಸ ಅವರು ,ಮೂಲತಃ ಮಂಡ್ಯದವರು. ಕೃತಿಗಳು: (ತಮಿಳುನಿಂದ ಕನ್ನಡಕ್ಕೆ ಅನುವಾದಿತ) ತಿರುಕ್ಕುರಳ್, ಪ್ರಸಾರ ಸಣ್ಣಕತೆಗಳು, ವಿಚಾರಣೆ, ತಿರುವಳ್ಳುವರ್, ಜ್ಞಾನರಥ ಕಾಲ್ಪನಿಕ ಗದ್ಯಕಥೆ ಹಾಗೂ (ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿತ) ನಾಗಣ್ಣನ ನಾಟ್ಯ ಹಾಗೂ ಹಾರಾಡುವ ತರಗತಿ. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಅನುವಾದ ಬಹುಮಾನ(1982), ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ ಲಭಿಸಿದೆ. ...
READ MORE