ಖ್ಯಾತ ಸಾಹಿತಿ ಡಾ. ಸಿ.ಎನ್. ರಾಮಚಂದ್ರನ್ ಅವರ ಬದುಕು-ಬರಹ ಕುರಿತು ಸಾಹಿತಿ ಡಾ. ಬಿ.ಎ. ವಿವೇಕ ರೈ ಅವರು ಸಂಪಾದಿಸಿದ ಕೃತಿ-ರೂಪಾಂತರ. ಡಾ. ಸಿ.ಎನ್. ರಾಮಚಂದ್ರನ್ ಅವರು ವಿದ್ವಾಂಸರು, ವಿಮರ್ಶಕರು. ಅವರು ಮೈಸೂರು ಜಿಲ್ಲೆಯ ಚಿಲ್ಕುಂದ ಗ್ರಾಮದವರು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಹಾಗೂ ನ್ಯಾಯಶಾಸ್ತ್ರದಲ್ಲಿ ಎಲ್.ಎಲ್.ಬಿ. ಪದವೀಧರರು. ಅಮೆರಿಕದ ಮಿಯಾಮಿ ವಿಶ್ವವಿದ್ಯಾಲಯದಿಂದ ಪಿಎಚ್. ಡಿ.ಪಡೆದರು. ಕರ್ನಾಟಕ, ಮಹಾರಾಷ್ಟ್ರ, ಅಮೆರಿಕ, ಸೌದಿ ಅರೇಬಿಯಾ, ಸೋಮಾಲಿಯಾಗಳಲ್ಲಿ ಪ್ರಾಧ್ಯಾಪಕರಾಗಿ ನಂತರ ಮಂಗಳೂರು ವಿಶ್ವವಿದ್ಯಾಲಯದಲ್ಲಿ ವಿಭಾಗದ ಮುಖ್ಯಸ್ಥರಾಗಿ, 1996ರಲ್ಲಿ ಪ್ರೊಫೆಸರ್ ಎಮಿರೆಟಸ್ ಆಗಿ ನಿವೃತ್ತರಾದರು. ಶಿಲ್ಪ ವಿನ್ಯಾಸ, ಸಾಹಿತ್ಯ ವಿಮರ್ಶೆ, ವಸಾಹತೋತ್ತರ ಚಿಂತನೆ, ತೌಲನಿಕ ಸಾಹಿತ್ಯ, ಪರಂಪರೆ ಪ್ರತಿರೋಧ, ಎಡ್ವರ್ಡ್ ಸೈದ್, ಬಯಲುರೂಪ, ಹೊಸ ಮಡಿಯ ಮೇಲೆ ಚದುರಂಗ, ಗಿರೀಶ ಕಾರ್ನಾಡರ ಚಾರಿತ್ರಿಕ ನಾಟಕಗಳು, ಭಾಷಾಂತರ: ಸೈದ್ಧಾಂತಿಕ ಮತ್ತು ಅನ್ವಯಿಕ ನೆಲೆಗಳು, ಡಾ. ಯು. ಆರ್. ಅನಂತಮೂರ್ತಿ ಮತ್ತು ಡಾ.ಎಸ್. ಎಲ್. ಭೈರಪ್ಪ ಕಥನ ಮತ್ತು ತಾತ್ವಿಕತೆ, ಆಶಯ- ಆಕೃತಿ, ರಕ್ತಿ - ರೂಪಣೆ, ಆಖ್ಯಾನ -ವ್ಯಾಖ್ಯಾನ ಕೃತಿಗಳನ್ನು ರಚಿಸಿದ್ದು, ಇವರ 'ಹೊಸಮಡಿಯ ಮೇಲೆ ಚದುರಂಗ ‘(2007) ಜಗತ್ತಿನ ಮಹತ್ವದ 25 ಮೌಖಿಕ ಮಹಾಕಾವ್ಯಗಳ ಅಧ್ಯಯನವನ್ನು ಒಳಗೊಂಡಿದೆ. ‘ಮಲೆ ಮಾದೇಶ್ವರ' ಕನ್ನಡ ಜನಪದ ಮಹಾಕಾವ್ಯವನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ. 'ನೆರಳುಗಳ ಬೆನ್ನು ಹತ್ತಿ' ಎಂಬುದು ಸಿ. ಎನ್. ರಾಮಚಂದ್ರನ್ ಅವರ ಆತ್ಮಕಥನವಾಗಿದೆ. ಸಿ.ಎನ್. ರಾಮಚಂದ್ರನ್ ಕುರಿತ ಬರಹಗಳನ್ನು ಸಂಪಾದಿಸಲಾಗಿದೆ.
©2024 Book Brahma Private Limited.