ಲೇಖಕ ಬಿ.ಟಿ ಬೆಳಗಟ್ಟ ಅವರು ಅನುವಾದಿಸಿ, ಸಂಪಾದಿಸಿರುವ ಕಥೆಗಳ ಸಂಕಲನ-ಹತ್ತು ಕತೆಗಳು. ರವೀಂದ್ರನಾಥ್ ಠಾಗೋರ್, ಮುನ್ಷಿ ಪ್ರೇಮಚಂದ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಲಿಯೋ ಟಾಲ್ ಸ್ಟಾಯ್ ರಂತಹ ಮಹಾನ್ ಲೇಖಕರ ಕಥೆಗಳು ಈ ಕೃತಿಯಲ್ಲಿವೆ.
ಕೃತಿಗೆ ಬೆನ್ನುಡಿ ಬರೆದ ಎಸ್.ಬಿ. ಮಂಜುನಾಥ ಅವರು `ವಿಷಯ ಅಥವಾ ವಸ್ತು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದರೂ, ಕಥೆಗಳೂ ಒಂದಿಲ್ಲೊಂದು ರೀತಿಯಲ್ಲಿ ಸಕಾರಾತ್ಮಕವಾದ ಸಂದೇಶವನ್ನು ಕೊಡುತ್ತಿವೆ. ಸರಳವಾದ ಭಾಷಾಪ್ರಯೋಗದ ಬಳಕೆ ಇದೆ. ಓದುಗರನ್ನು ನೇರವಾಗಿ ಸುಲಭವಾಗಿ ಓದಿಸಿಕೊಂಡು ಹೋಗುತ್ತವೆ. ಭಾಷಾಂತರದ ಪ್ರಯೋಗವು ಸಮರ್ಪಕವಾಗಿ ಮೂಡಿದ್ದು, ಕೆಲವು ಪಾತ್ರಗಳ ಹೆಸರುಗಳು ಹಾಗೂ ಪ್ರದೇಶವನ್ನು ಸ್ಥಳೀಯಗೊಳಿಸಿರುವಂತೆ ಕಾಣುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.