ಪ್ರೊ.ಎಸ.ಎಸ್. ಅಂಗಡಿ ಅವರ ಕೃತಿ-ಹರಿಹರನ ಸರಳ ಬಸವರಾಜ ದೇವರ ರಗಳೆಗಳು. ಹರಿಹರ ಕವಿಯು ರಗಳೆಗಳಿಗೆ ಪ್ರಸಿದ್ಧಿ. ಈತನ ರಗಳೆಗಳು ಸುದೀರ್ಘ ಕಾವ್ಯದಷ್ಟೇ ಆಳವಾದ ಪರಿಣಾಮವನ್ನು ಬೀರುತ್ತವೆ. ಓದಲು ಸಹ ಸಣ್ಣ ಸಣ್ಣ ರಚನೆಗಳಂತಿರುವುದು ಹೆಚ್ಚು ಆಪ್ತವೆನಿಸುತ್ತವೆ. ಬಸವರಾಜ ದೇವರ ರಗಳೆಗಳನ್ನು ಸಂಪಾದಿಸಿರುವ ಲೇಖಕರು ಸರಳವಾಗಿ ಅದರ ಅರ್ಥವನ್ನು ವಿವರಿಸಿ, ಹಳೆಗನ್ನಡ ಓದನ್ನು ಹೆಚ್ಚು ಆಸಕ್ತಿಯುತವನ್ನಾಗಿ ಮಾಡಿದ್ದಾರೆ.
ಪ್ರೊ. ಎಸ್.ಎಸ್. ಅಂಗಡಿ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು. ಪ್ರಾಚೀನ ಸಾಹಿತ್ಯ, ಹಸ್ತಪ್ರತಿ ಗ್ರಂಥ ಸಂಪಾದನೆ, ಭಾಷಾಶಾಸ್ತ್ರ ಬಗೆಗೆ ಅಪಾರ ಪಾಂಡಿತ್ಯ ಹೊಂದಿರುವ ಅವರು 'ಸರಳ ಶಬ್ದಮಣಿ ದರ್ಪಣ', 'ಕನ್ನಡ ಹಸ್ತಪ್ರತಿ ಭಾಷಿಕ ವಿವೇಚನೆ', 'ಕರ್ನಾಟಕ ಗ್ರಂಥ ಸಂಪಾದನೆ', 'ಸರಳ ಕವಿರಾಜಮಾರ್ಗ' ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರು ಪ್ರಕಟಿಸಿದ ಸಂಶೋಧನಾ ಲೇಖನಗಳು ಹೀಗಿವೆ: ಗ್ರಂಥಸಂಪಾದನೆ : ಕೆ.ಜಿ.ಕುಂದಣಗಾರ, ಕೆ.ಜಿ.ಕುಂದಣಗಾರ ಅಧ್ಯಯನ ವಿಧಾನ, ಹರ್ಮನ್ ಮೋಗ್ಲಿಂಗ್ ಸಂಶೋಧನ ವೈಧಾನಿಕತೆ, ಗ್ರಂಥ ಸಂಪಾದನೆ: ಶಿ.ಚ.ನಂದಿಮಠ, ಗ್ರಂಥ ಸಂಪಾದನೆ: ಗೊರೆಬಾಳ್ ಹನುಮಂತರಾಯ, ಗ್ರಂಥ ಸಂಪಾದನೆ: ಎನ್.ಅನಂತರಂಗಾಚಾರ್, ಕರ್ನಾಟಕ ಕವಿಚರಿತೆ: ರಚನೆಯ ...
READ MORE