‘ಬಯಲ ರೆಕ್ಕೆಗಳು’ ಲೇಖಕ ದೇವು ಮಾಕೊಂಡ ಅವರ ಸಂಪಾದನಾ ಕೃತಿ. ಹಿರಿಯ ಸಂಶೋಧಕ ಡಾ.ಎಂ. ಎಂ. ಪಡಶೆಟ್ಟಿ ಹಾಗೂ ಡಾ. ಚನ್ನಪ್ಪ ಕಟ್ಟಿ ಅವರು ಫೇಸ್ಬುಕ್ ಲೈವ್ ನಲ್ಲಿ ‘ನೆಲೆ ಸಂಭ್ರಮದ ಕಾವ್ಯ ಸಪ್ತಾಹ, ಕಥಾ ಸಪ್ತಾಹ ಹಾಗೂ ಚಿಂತನ ಸಪ್ತಾಹ’ ಎಂಬ ವಿನೂತನ ಕಾರ್ಯಕ್ರಮ ರೂಪಿಸಿ, ಉದಯೋನ್ಮುಖ ಕವಿಗಳಿಂದ ಕವಿಗೋಷ್ಠಿ, ಕತೆಗಾರರಿಂದ ಕಥಾಗೋಷ್ಠಿ ಮತ್ತು ಹಿರಿಯ ಚಿಂತಕರಿಂದ ಚಿಂತನಗೋಷ್ಠಿ ನಡೆಸಿದ್ದರು. ‘ಕಾವ್ಯ ಸಪ್ತಾಹ’ ದಲ್ಲಿ 40 ಕವಿಗಳು ದಿನಕ್ಕೊಬ್ಬರಂತೆ ಏಳು ದಿನಗಳ ಕಾಲ ಕಾವ್ಯ ವಿವೇಚನೆ ಮಾಡಿದ ಹಿರಿಯ ಕವಿಗಳು, ವಿಮರ್ಶಕರು ಮಂಡಿಸಿದ ವಿಷಯವನ್ನು ಲೇಖಕ ದೇವು ಮಾಕೊಂಡ ಅವರು ಸಂಗ್ರಹಿಸಿ ಸಂಪಾದಿಸಿದ್ದೇ ಈ ಕೃತಿ-ಬಯಲ ರೆಕ್ಕೆಗಳು.
ಯುವ ಬರಹಗಾರ ದೇವು ಮಾಕೊಂಡ ಅವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದವರು. ಸಿಂದಗಿಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದಾರೆ. ‘ಬಿಕರಿಗಿಟ್ಟ ಕನಸು, ಹೆಗ್ಗೇರಿಸಿದ್ದ ಚರಿತೆ’ ಅವರ ಪ್ರಕಟಿತ ಕವನ ಸಂಕಲನಗಳು. ಹಲವಾರು ಲೇಖನಗಳು ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ. ಗುರುರತ್ನ, ವಿದ್ಯಾಸಿರಿ ವಿಷಾರದ, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಹಸ್ತಪ್ರತಿ ಬಹುಮಾನ, ಆಕಾಶವಾಣಿ ಭದ್ರಾವತಿಯಿಂದ ಪ್ರತಿಭಾ ಪ್ರಶಂಸಾ ಪ್ರಶಸ್ತಿಗಳು ಲಭಿಸಿವೆ. ಅಲ್ಲದೇ ವಿಜಯಪುರ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮೀರವಾಡಿ ದತ್ತಿ ಪ್ರಶಸ್ತಿಯೂ ದೊರೆತಿದೆ. ...
READ MORE