ಪಂಡಿತಾರಾಧ್ಯ ಚಾರಿತ್ಯ್ರ ಸಂಗ್ರಹ

Author : ಕಲ್ಯಾಣರಾವ ಜಿ. ಪಾಟೀಲ

Pages 138

₹ 120.00




Year of Publication: 2019
Published by: ವೀರೇಶ್ವರ ಪುಣ್ಯಾಶ್ರಮ ಪ್ರಕಾಶನ
Address: ಸೊಲ್ಲಾಪುರ-413001, (ಮಹಾರಾಷ್ಟ್ರ ರಾಜ್ಯ)

Synopsys

ಪಂಡಿತಾರಾಧ್ಯ ಚಾರಿತ್ರ ಸಂಗ್ರಹ ಕೃತಿಯು ತಾಡೋಲೆ ಹಸ್ತಪ್ರತಿಯ ಕಾವ್ಯ ಸಂಪಾದನೆಯಾಗಿದೆ. ಡಾ. ಬಿ.ಬಿ. ಪೂಜಾರಿ ಪ್ರಧಾನ ಸಂಪಾದಕರು ಹಾಗೂ ಡಾ. ಕಲ್ಯಾಣರಾವ ಜಿ. ಪಾಟೀಲ, ಡಾ. ಗುರುಲಿಂಗಪ್ಪ ಎಸ್. ಧಬಾಲೆ ಸಂಪಾದಕರು. ಪಾಲ್ಕುರಿಕೆ ಸೋಮನಾಥನ ‘ಪಂಡಿತಾರಾಧ್ಯ ಚರಿತಮು’ ಎಂಬ ತೆಲುಗು ಕೃತಿಯನ್ನು ಕನ್ನಡಕ್ಕೆ ರೂಪಾಂತರಿಸಿದವರು ಶ್ರೀ ನೀಲಕಂಠಾಚಾರ್ಯರು. ಈತನ ಕಾಲವನ್ನು ಕ್ರಿ.ಶ. 1485; ಬ್ರಾಹ್ಮಣ ಮತಸ್ಥ ಎಂದು ಕವಿಚರಿತೆಕಾರರು ದೃಢಪಡಿಸಿದ್ದಾರೆ. ಸೋಮನಾಥನ ಭಾಷಾ ಪ್ರೌಢಿಮೆ, ಜೀವನಸಾರ, ವಿದ್ವತ್ತಿನ ದರ್ಶವನ್ನು ಕನ್ನಡದ ಶ್ರೀ ನೀಲಕಂಠಾಚಾರ್ಯ ವಿರಚಿತ ‘ಪಂಡಿತಾರಾಧ್ಯ ಚಾರಿತ್ರ ಸಂಗ್ರಹ’ ಕೃತಿ ಯಲ್ಲಿಯೂ ಗಮನಿಸಬಹುದಾಗಿದೆ. ಪಂಡಿತಾರಾಧ್ಯ ಚಾರಿತ್ರದಲ್ಲಿ ದೀಕ್ಷಾ ಪ್ರಕರಣ, ಪುರಾತನ ಪ್ರಕರಣ, ವಾದ ಪ್ರಕರಣ, ಮಹಿಮ ಪ್ರಕರಣ ಮತ್ತು ಪರ್ವತ ಪ್ರಕರಣಗಳಿವೆ. ವಿದ್ಯಾವಂತ ಮನೆತನದ ನೀಲಕಂಠಾಚಾರ್ಯರು ಪ್ರಾರಂಭದಲ್ಲಿ ತಮ್ಮ ವಂಶಾವಳಿಯನ್ನು ವಿವರವಾಗಿ ಹೇಳಿಕೊಂಡಿದ್ದಾರೆ. ದೀಕ್ಷಾ ಪ್ರಕರಣದಲ್ಲಿ ಅನೇಕ ದೇವತೆಗಳನ್ನು ನೂತನ-ಪುರಾತನ ಶಿವಶರಣರನ್ನು ಸ್ಮರಿಸಿಕೊಂಡು ಗೌರವಿಸಿದ್ದಾರೆ. ಗುರುವಿನ ಸ್ತುತಿಯನ್ನು ಮಾಡಿದ್ದಾರೆ. ವಾದ ಪ್ರಕರಣದಲ್ಲಿ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಬೇರೆ ಬೇರೆ ಧರ್ಮಿಯರನ್ನು ವಾದದಲ್ಲಿ ಸೋಲಿಸಿ ವೀರಶೈವ ಧರ್ಮದ ಶ್ರೇಷ್ಠತೆಯನ್ನು ಶಾಸ್ತ್ರಾಧಾರಗಳಿಂದ ತೋರಿಸಿಕೊಟ್ಟಿರುವ ವಿವರಗಳನ್ನು ಗುರುತಿಸಬಹುದಾಗಿದೆ. ಪುರಾತನ ಪ್ರಕರಣದಲ್ಲಿ ಬಸವಣ್ಣನವರ ಹಿರಿಯ ಸಮಕಾಲೀನ ಶರಣರಾದ ಕೆಂಭಾವಿ ಭೋಗಣ್ಣ, ಜೇಡರದಾಸಿಮಯ್ಯ, ಡೋಹಾರ ಕಕ್ಕಯ್ಯ, ಮಾದಾರ ಧೂಳಯ್ಯ ಮತ್ತು ಶಿವನಾಗಮಯ್ಯರಂತಹ ಪುರಾತನ ಶಿವಭಕ್ತಿ ಮಹಿಮೆಯನ್ನು ಕೊಂಡಾಡಲಾಗಿದೆ. ಬಸವಣ್ಣನವರ ಅತಿಶಯವಾದ ವರ್ಣನೆಯ ಇರುವುದು ಮಹಿಮಾ ಪ್ರಕರಣದಲ್ಲಿ. ಬಸವಣ್ಣನವರನ್ನು ಕುರಿತು ರಸವತ್ತಾಗಿ ಕವಿ ವಿವರಿಸುತ್ತ, ಆತ ಜಂಗಮಪ್ರಾಣಿ, ಮೋಕ್ಷದಾಯಕವೆಂದು ಬಣ್ಣಿಸಿದ್ದಾನೆ. ಪರ್ವತ ಪ್ರಕರಣದಲ್ಲಿನ ಶ್ರೀಗಿರಿಯ ಮಹಿಮೆಯೊಂದಿಗೆ, ಶ್ರೀಶೈಲದಲ್ಲಿ ಶ್ರೀ ಮಲ್ಲಿಕಾರ್ಜುನ ಪಂಡಿತಾರಾಧ್ಯರು, ಶಿವೈಕ್ಯ ಹೊಂದುವ ಸಂದರ್ಭವನ್ನು ಸಂಗ್ರಹಿಸಲಾಗಿದೆ. ಸೊಲ್ಲಾಪುರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಲಭಿಸಿರುವ ನೀಲಕಂಠಾಚಾರ್ಯ ವಿರಚಿತ ‘ಪಂಡಿತಾರಾಧ್ಯ ಚರಿತ್ರ’ವೆಂಬ ತಾಡೋಲೆ ಪ್ರತಿಯನ್ನು ಪ್ರಸ್ತುತ ಸಂಪಾದನೆಗೆ ಬಳಸಿಕೊಳ್ಳಲಾಗಿದೆ. ಹಸ್ತಪ್ರತಿಯ ಜೊತೆಗೆ ತಾಳೆನೋಡಲು ಎನ್. ಬಸವಾರಾಧ್ಯ ಸಂಪಾದಿಸಿ ಪ್ರಕಟಿಸಿದ ನೀಲಕಂಠಾಚಾರ್ಯ ವಿರಚಿತ ಆರಾಧ್ಯ ಚಾರಿತ್ರ ಕೃತಿಯನ್ನು ಬಳಸಿಕೊಳ್ಳಲಾಗಿದೆಂದು ಸಂಪಾದಕರು ನಿವೇದಿಸಿಕೊಂಡಿದ್ದಾರೆ. ಬೃಹತ್ ಕೃತಿಯ ವಿಷಯವನ್ನು ಸಂಕ್ಷಿಪ್ತಗೊಳಿಸಿಕೊಳ್ಳಲಾಗಿದೆ. ಇಂದಿನ ಸಂದರ್ಭಕ್ಕೆ ಅತ್ಯಗತ್ಯ ವಾಗಿರುವ ಧರ್ಮ ಸಾಮರಸ್ಯದ ಮತ್ತು ಭಾವೈಕ್ಯತೆಗೆ ದಿಕ್ಸೂಚಿಯಂತಿರುವ ಸಂದರ್ಭಗಳನ್ನು ಕವಿ-ಕೃತಿಯ ಆಶಯಕ್ಕೆ ಧಕ್ಕೆಯಾಗದಂತೆ 15 ಶೀರ್ಷಿಕೆಗಳ 401 ವಾರ್ಧಕ ಷಟ್ಪದಿಗಳನ್ನು ಸಂಪಾದನೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.ಮಹತ್ತರವಾದ ಈ ಕೃತಿಯು ತೆಲುಗು-ಮರಾಠಿ-ಕನ್ನಡ ಭಾಷಿಕ ಸಾಂಸ್ಕೃತಿಕ ಹಿರಿಮೆಯ ಹೆಗ್ಗುರುತಾಗಿದೆ.

About the Author

ಕಲ್ಯಾಣರಾವ ಜಿ. ಪಾಟೀಲ

ಲೇಖಕ ಡಾ. ಕಲ್ಯಾಣರಾವ ಜಿ. ಪಾಟೀಲ ಅವರು ಮೂಲತಃ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಸೊಂತ ಸಮೀಪದ ಸರಪೋಷ್ ಕಿಣಗಿ ಗ್ರಾಮದವರು. ತಂದೆ- ಗುರುಪಾದಪ್ಪ ಮಾಲಿಪಾಟೀಲ, ತಾಯಿ- ಮಹಾದೇವಿಯಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ  ಹಾಗೂ ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಪಕ್ಕದೂರಾದ ಚೇಂಗಟಾದಲ್ಲಿ ಪೂರ್ಣಗೊಳಿಸಿದರು. ಪ್ರೌಢಶಾಲೆಯಿಂದ ಪದವಿಯವರೆಗೂ ಕಲಬುರಗಿಯ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ನಂತರ  ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಿಂದ ಕಾಲೇಜಿಗೆ ಪ್ರಥಮ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಹತ್ತನೇ ರ್‍ಯಾಂಕಿನೊಂದಿಗೆ ಬಿ.ಎ. ಪದವಿ ಪಡೆದರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎರಡನೆಯ ರ್‍ಯಾಂಕಿನೊಂದಿಗೆ ಎಂ.ಎ ಪದವಿ ಹಾಗೂ ಮೂರನೇ ರ್‍ಯಾಂಕಿನೊಂದಿಗೆ ಎಂ.ಫಿಲ್ ಪದವಿ  ಹಾಗೂ ಡಾ. ಎಂ.ಎಂ. ...

READ MORE

Related Books