ಲೇಖಕ ಡಾ. ನಾಗಪ್ಪ ಟಿ. ಗೋಗಿ ಹಾಗೂ ಡಾ. ಸಿದ್ಧಲಿಂಗ ದಬ್ಬಾ ಅವರು ಜಂಟಿಯಾಗಿ ಸಂಪಾದಿತ ಕೃತಿ-ಕಲಬುರಗಿ ಜಿಲ್ಲೆಯ ಸಾಹಿತಿಗಳು. ಕಲಬುರಗಿ ಜಿಲ್ಲೆಗೆ ಕನ್ನಡ ಸಾಹಿತ್ಯದಷ್ಟೇ ಪ್ರಾಚೀನ ಇತಿಹಾಸವಿದೆ. ಕನ್ನಡ ಸಾಹಿತ್ಯಕ್ಕೆ ಮೂಲ ಅಕ್ಷರಗಳನ್ನು ಕಲಿಸಿದವರೇ ಈ ಜಿಲ್ಲೆಯವರು. ಅಂದರೆ ಕವಿರಾಜ ಮಾರ್ಗದ ಶ್ರೀವಿಜಯ ಇಲ್ಲಿಯವರೇ. ಹೀಗೆ ಹತ್ತು ಹಲವು ಪ್ರಥಮಗಳನ್ನು ಪಡೆದ ಜಿಲ್ಲೆಯ ಇದು. ಹೈದ್ರಾಬಾದ್ ಕರ್ನಾಟಕದ ಪ್ರದೇಶ ವ್ಯಾಪ್ತಿಯ ಎಲ್ಲ ಆರೂ ಜಿಲ್ಲೆಗಳ ಸಾಹಿತಿಗಳ ಮಾಹಿತಿಕೋಶವನ್ನು ಸಿದ್ಧಪಡಿಸಿದ್ದಾರೆ. ಸಾಹಿತಿ ಡಾ. ಕಲ್ಯಾಣರಾವ್ ಪಾಟೀಲ್ ಅವರು ಕೃತಿಗೆ ಬೆನ್ನುಡಿ ಬರೆದು ‘ಕಲಬುರಗಿ ಜಿಲ್ಲೆಯ ಸಾಹಿತಿಗಳ ಸಮಗ್ರ ಕೋಶ ಸಿದ್ಧಪಡಿಸುವಿಕೆಯು ಅಗತ್ಯವಿತ್ತು. ಅದನ್ನು ಈ ಇಬ್ಬರು ಯುವಕರು ಈ ಕೊರತೆ ನೀಗಿಸಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.