‘ಎಮರ್ಜೆನ್ಸಿ’ ಸಂವಿಧಾನದ ಕೊಲೆಗೆ ನಡೆದ ಸಂಚು ಕುರಿತು ಬರೆದಿರುವ ರೋಹಿತ್ ಚಕ್ರತೀರ್ಥ ಅವರ ಸಂಪಾದಿತ ಲೇಖನ ಸಂಕಲನವಾಗಿದೆ. ಇಲ್ಲಿ 1975 ರಲ್ಲಿ ಕಾಂಗ್ರೆಸ್ ಪಕ್ಷದ ಇಂದಿರಾ ಗಾಂಧಿ ಘೋಷಿಸಿದ ತುರ್ತು ಪರಿಸ್ಥಿತಿಯ ಕುರಿತು ವಿವರಿಸಲಾಗಿದೆ. ಇನ್ನು ಇದೊಂದು ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಅಳಿಸಲಾರದ ಕಪ್ಪುಚುಕ್ಕೆ. ಇದು ಏಕಾಯಿತು, ಹೇಗಾಯಿತು ಇದರ ಪರಿಣಾಮಗಳೇನು, ಸಂವಿಧಾನದ ಸ್ವರೂಪಕ್ಕೆ ಆದ ಘಾಸಿಯ ಪ್ರಮಾಣ ಎಂಥದ್ದು, ಷಾ ಆಯೋಗದ ವರದಿಯಲ್ಲಿ ದಾಖಲಿಸಿದ ಸತ್ಯಗಳೇನು, ಅ ವರದಿಯನ್ನು 35 ವರ್ಷ ಮುಚ್ಚಿಡುವುದಕ್ಕೆ ಏನು ಕಾರಣ. ಇತ್ಯಾದಿ -ಕನ್ನಡದಲ್ಲಿ ಇದುವರೆಗೂ ಪ್ರಕಟವಾಗದ ಮಾಹಿತಿಗಳನ್ನು ಸಂಗ್ರಹ ರೂಪದಲ್ಲಿ ಕೊಡುವ ಕೃತಿಯಿದು.
ರೋಹಿತ್ ಚಕ್ರತೀರ್ಥ, ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕರಾಗಿ ಕಾಲೇಜುಗಳಲ್ಲಿ ಪಾಠ ಮಾಡಿ, ಈಗ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡು, ಹಲವು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ. ಜೊತೆಗೆ ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಇದುವರೆಗೆ 13 ಪುಸ್ತಕಗಳು ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಹವ್ಯಾಸ., ...
READ MORE