ಲೇಖಕ ಡಿ. ವಿ. ಪ್ರಹ್ಲಾದ್ ಅವರ ಸಂಪಾದಿತ ಕೃತಿ ʻಮತ್ತೊಮ್ಮೆ ಭಗವದ್ಗೀತೆ- ಹಲವು ನೋಟಗಳುʼ. ಪುಸ್ತಕದಲ್ಲಿ “ಕಾಲಕಾಲವೂ ದೇಶ ದೇಶವೂ ತಮ್ಮ ತಮ್ಮ ಉಪಾಧಿಗಳಿಂದ ಗೀತೆಯನ್ನು ಬಂಧಿಸ ಹೊರಟರೂ, ಯಾವ ದೇಶದ ಮತ್ತು ಕಾಲದ ಹಿಡಿತಕ್ಕೂ ಅದು ಸಂಪೂರ್ಣವಾಗಿ ಅಳವಡಿಸಿಕೊಳ್ಳದೆ ತನ್ನ ಪ್ರವಚನ ಪ್ರಚೋದನಾ ಸಾಮರ್ಥ್ಯವನ್ನು ಉಳಿಸಿಕೊಂಡೇ ನಡೆಯುತ್ತಿದೆ. ಗೀತೆಯ ಸ್ವಾರಸ್ಯವನ್ನು ಬುದ್ಧಿಯೊಂದೇ ಅಲ್ಲ, ಹೃದಯವೂ ಕಂಡುಕೊಳ್ಳಬೇಕಾಗಿರುವುದರಿಂದ, ಈ ವಾಗಮೃತವನ್ನು ವಿಪುಲಾರ್ಥವುಳ್ಳ 'ಧ್ವನಿ' ಕಾವ್ಯವೆಂದು ಕರೆಯಬಹುದು” ಎಂದು ಹೇಳಲಾಗಿದೆ.
©2024 Book Brahma Private Limited.