‘ಬಾಂಧವ್ಯ’ ಕನ್ನಡ ಮರಾಠಿ ಕೃತಿಯು ರಾಜಶೇಖರ ಇಚ್ಚಂಗಿ ಅವರ ಸಂಪಾದಿತ ಕೃತಿಯಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಬಸವರಾಜ ಜಗಜಂಪಿ, ` ಡಾ. ರಾಜಶೇಖರ ಇಚ್ಚಂಗಿ, ಕನ್ನಡದ ಕ್ರಿಯಾಶೀಲ ಪ್ರಯತ್ನದಿಂದ ಪ್ರಾಧ್ಯಾಪಕರು, ಪರಿಶ್ರಮದ ಅಪರೂಪವಾದುದನ್ನೇ ಸಾಧಿಸಬೇಕೆನ್ನುವ ಪ್ರಬಲ ಹಂಬಲದವರು. ಹಲವಾರು ಸಾಹಿತ್ಯಕ, ಸಾಂಸ್ಕೃತಿಕ, ಸಂಘಟನೆಗಳೊಂದಿಗೆ ಗುರುತಿಸಿಕೊಂಡವರು. ಸರಳ ಸಜ್ಜನಿಕಯವರೆಂದೇ ಹೆಸರಾದವರು. ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಇಚ್ಚಂಗಿಯವರ ಆಸಕ್ತಿ ಅನನ್ಯವಾದುದು. ಓದು ರೂಢಿಸಿಕೊಂಡ ಮತ್ತು ಬರಹಗಳನ್ನು ಹದವಾಗಿಸಿಕೊಂಡ ಇಚ್ಚಂಗಿ ಒಬ್ಬ ಚಿಂತನಶೀಲರೂ ಹೌದು. ಅಧ್ಯಯನಶೀಲತೆ ಹಾಗೂ ಪರಿಶ್ರಮದ ಫಲವಾಗಿ ಮೂಡಿಬಂದ ಅವರ ಬರಹಗಳು ಸಂಶೋಧನ ಕ್ಷೇತ್ರಕ್ಕೆ ಉತ್ತಮ ಕೊಡುಗೆಯಾಗಿವೆ. ಇಪತ್ತಕ್ಕೂ ಮಿಕ್ಕಿದ ಕೃತಿಗಳ ಲೇಖಕ ಡಾ. ಇಚ್ಚಂಗಿಯವರು ಇದೀಗ ಬಾಂಧವ್ಯ ಎ೦ಬ ಸಂಪಾದಿತ ಕೃತಿಯನ್ನು ಪ್ರಕಟಿಸುತ್ತಿರುವುದು ಅಭಿನಂದನೀಯ. ಕನ್ನಡ-ಮರಾಠಿ ಭಾಷಾ ಬಾಂಧವ್ಯದ ಹಲವು ಆಯಾಮಗಳನ್ನು ಪರಿಚಯಿಸುವ ಮೂಲಕ 'ಬಾಂಧವ್ಯ' ಕೃತಿ ಹೊಸ ಅನುಭವ ನೀಡುತ್ತದೆ. ಅಂತೆಯೇ ಡಾ. ರಾಜಶೇಖರ ಇಚ್ಚಂಗಿ ಶ್ರಮವಹಿಸಿ ಸಂಪಾದಿಸಿದ 'ಬಾಂಧವ್ಯ' ಕೃತಿ ಹತ್ತರಕೂಡ ಹನ್ನೊಂದಾಗದೆ ತನ್ನದೇ ವೈಶಿಷ್ಟ್ಯಗಳನ್ನು ಒಳಗೊಂಡು ಹೊರಬಂದಿದೆ’ ಎಂದಿದ್ದಾರೆ.
ಲೇಖಕ ರಾಜಶೇಖರ ಇಚ್ಚಂಗಿ ಅವರು ಗದಗ ಜಿಲ್ಲೆಯ ಬಟ್ಟೂರದವರು. ಅವರು 1957 ಜೂನ್ 01ರಂದು ಜನಿಸಿದರು. ಸ್ನಾತಕೋತ್ತರ ಪದವಿ ಪಡೆದಿರುವ ಇವರು ವೃತ್ತಿಯಿಂದ ಪ್ರಾಧ್ಯಾಪಕರು. ‘ಪಾರ್ಶ್ವನಾಥ ಪುರಾಣ-ಒಂದು ತೌಲನಿಕ ಅಧ್ಯಯನ’ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಗಳಿಸಿದ್ದಾರೆ. ಕೃತಿಗಳು: ಚಿತ್ರ ಸಂಚಯ; ಬೆಟಗೇರಿ ಕೃಷ್ಣಶರ್ಮ, ಶಂಬಾಜೋಶಿ, ಅಣ್ಣಾ ಹಜಾರೆ, ಪಂಡಿತ ಸದಾಶಿವ ಶಾಸ್ತ್ರಿಗಳು- ವ್ಯಕ್ತಿ ಚಿತ್ರ ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಕನ್ನಡ-ಕರ್ನಾಟಕ’, ‘ಕೆಲವು ಚಿಂತಕರು’ ಅವರ ವಿಮರ್ಶಾ ಕೃತಿಯಾಗಿದ್ದು ‘ಸಂಸ್ಕೃತಿ ಶೋಧ’ ಅವರ ಸಂಶೋಧನಾ ಕೃತಿ. ‘ಅಡವಿಸಿರಿ’, ‘ಹಿರಣ್ಯ ಗಂಗೋತ್ರಿ’, ‘ಅರ್ಪಣ’, ‘ಬೆಳಗಾವಿ ಬೆಡಗು’ ಅವರ ಸಂಪಾದಿತ ಕೃತಿಗಳು. ಬೆಳಗಾವಿ ಜಿಲ್ಲೆಯ ಸಾಂಸ್ಕೃತಿಕ ವೈವಿಧ್ಯ. ಅವರ ಮಹತ್ವದ ಕೃತಿ. ಅವರಿಗೆ ಕರ್ನಾಟಕ ಇತಿಹಾಸ ...
READ MORE