ʼಲೇಖ-ಲೋಕ 6ʼ ಲೇಖನಾ ಸಂಕಲನವನ್ನು ಡಾ. ವಸುಂಧರಾ ಭೂಪತಿ ಪ್ರಧಾನ ಸಂಪಾದಕರಾಗಿ, ಡಾ. ಬಿ.ಎನ್ ಸುಮಿತ್ರಾಬಾಯಿ ಸಂಪಾದಕರಾಗಿ, ಆಶಾ ದೇವಿ ಸಹ ಸಂಪಾದಕರಾಗಿ ಈ ಕೃತಿಯನ್ನು ಸಂಪಾದಿಸಿದ್ದಾರೆ. ಈ ಪುಸ್ತಕವು ಲೇಖಕಿಯರ ಜೀವನವೃತ್ತಾಂತವನ್ನು ಸಂಕ್ಷಿಪ್ತ ರೂಪದಲ್ಲಿ ಪರಿಚಯಿಸುವ ಲೇಖನಮಾಲೆ. ಲೇಖಕಿಯರೇ ಬರೆದು ಪ್ರಸ್ತುತಪಡಿಸಿದ್ದಾರೆ. ಈ ಕೃತಿಯು ಸೃಜಾನಾತ್ಮಕ ಬರಹಗಳನ್ನು ಅಧ್ಯಯನ ಮಾಡುವುದಕ್ಕೆ ಅಗತ್ಯವಾದ ಕೆಲವು ಮಾರ್ಗಸೂಚಿಗಳನ್ನು ನೀಡುತ್ತದೆ. ಈ ಕೃತಿಯಲ್ಲಿ ಬರುವ ಲೇಖಕಿಯರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ವಿಭಿನ್ನ ಅನುಭವಗಳನ್ನು ಹೊಂದಿದವರು. ಬಾಲ್ಯಾನುಭವಗಳಿಂದ ಹಿಡಿದು ಕೌಟುಂಬಿಕ ಬದುಕಿನ ಪ್ರಮುಖ ಸಂಗತಿಗಳನ್ನು ಒಳಗೊಳ್ಳುವ ಈ ಬರಹಗಳಲ್ಲಿ ಒಂದು ವ್ಯಕ್ತಿತ್ವವನ್ನು ಸಾಂದ್ರವಾಗಿ ಕಟ್ಟಿಕೊಳ್ಳುವ ಪಯತ್ನವನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.
ಡಾ. ವಸುಂಧರಾ ಭೂಪತಿ ಕರ್ನಾಟಕದ ರಾಯಚೂರಿನಲ್ಲಿ 1962 ರ ಜೂನ್ 5 ರಂದು ಜನಿಸಿದರು. ಇವರು ಬರೆದಿರುವ ವಿಜ್ಞಾನ ಪ್ರಥಮ ಚಿಕಿತ್ಸೆ, ಶುಚಿತ್ವ, ಆರೋಗ್ಯ-ಆರೈಕೆ ಲೇಖನಗಳು ವಾರಪತ್ರಿಕೆ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ವಸುಂದರಾ ಭೂಪತಿಯವರು ವೈದ್ಯಕೀಯ ಸಾಹಿತ್ಯ ಮಾಲೆ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಸಪತ್ರಿಕೆ ‘ಬಾಲ ವಿಜ್ಞಾನ’, ಆರೋಗ್ಯ ಅನುರಾಗ ಮಾಸಪತ್ರಿಕೆ, ಆಯುರ್ವೇದ ಮತ್ತು ಯೋಗ ಮಾಸಪತ್ರಿಕೆ, ವಿಜ್ಞಾನ ಲೋಕ ತ್ರೈಮಾಸಿಕ ಪತ್ರಿಕೆ ಹಾಗೂ ಆರೋಗ್ಯ ವಿಜ್ಞಾನ ತ್ರೈಮಾಸಿಕ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾರೆ. ಮತ್ತು ವೈದ್ಯ ಲೋಕ ಮಾಸಪತ್ರಿಕೆಯ ಸಂಪಾದಕರಾಗಿ ...
READ MORE