ಹತ್ತು ಆಶ್ವಾಸಗಳುಳ್ಳ ಈ ಚಂಪೂ ಕೃತಿಯನ್ನು ರನ್ನನು ತನ್ನ ಆಶ್ರಯದಾತ ಅರಸನಾದ ಸತ್ಯಾಶ್ರಯನನ್ನು ಮಹಾಭಾರತದ ಭೀಮನಿಗೆ ಹೋಲಿಸಿ, ಭೀಮನನ್ನೇ ಕಥಾನಾಯಕನನ್ನಾಗಿ ಕಲ್ಪಿಸಿ ಬರೆದ ‘ಗದಾಯುದ್ಧ’ವನ್ನು ತೀ.ನಂ.ಶ್ರೀ ಅವರು ಸಂಪಾದಿಸಿದ್ದಾರೆ. ಅಲ್ಲದೆ ಇದು ಕೇವಲ ಗದಾಯುದ್ಧದ ಪ್ರಸಂಗವನ್ನಷ್ಟೇ ಮಾತ್ರವಲ್ಲದೆ ಸಮಗ್ರ ಮಹಾಭಾರತದ ಅವಲೋಕನವನ್ನು ಕಾಣಬಹುದಾಗಿದೆ. ಈ ಕೃತಿ ಸುಮಾರು ಹದಿನೇಳು ಮುದ್ರಣಗಳನ್ನು ಕಂಡು ಮುಂದೆ ಸಾಗುತ್ತಿರುವುದು ಕೃತಿಯ ಶ್ರೇಷ್ಥತೆಗೆ ಸಾಕ್ಷಿ.
ತೀ.ನಂ.ಶ್ರೀ ಎಂತಲೇ ಪರಿಚಿತರಾಗಿರುವ ತೀರ್ಥಪುರ ನಂಜುಂಡಯ್ಯನವರ ಮಗ ಶ್ರೀಕಂಠಯ್ಯ ಅವರ ಹುಟ್ಟೂರು ಚಿಕ್ಕನಾಯಕನಹಳ್ಳಿ ಹತ್ತಿರದ ತೀರ್ಥಪುರ. ಮೈಸೂರಿನಲ್ಲಿ ಪದವಿ ಪಡೆದಿದ್ದ ಇವರು ಸಿವಿಲ್ ಸರ್ವೀಸ್ ಪರೀಕ್ಷೆ ಪಾಸು ಮಾಡಿ ಕೇವಲ ಒಂದುವರೆ ತಿಂಗಳು ಮಾತ್ರ ಅಮಾಲ್ದಾರರಾಗಿ ಸೇವೆ ಸಲ್ಲಿಸಿದ್ದ ಅವರು ಕಾಲೇಜಿನ ಅಧ್ಯಾಪಕರಾದರು. ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಬರೆದ ಕೃತಿಗಳೆಂದರೆ ಒಲುಮೆ, ಹೆಣ್ಣು ಮಕ್ಕಳ ಪದಗಳು, ಬಿಡಿಮುತ್ತು, ಪಂಪ, ನಂಬಿಯಣ್ಣನರಗಳೆ, ರನ್ನನ ಗದಾಯುದ್ಧ ಸಂಗ್ರಹ, ಭಾರತೀಯ ಕಾವ್ಯ ಮೀಮಾಂಸೆ, ಕನ್ನಡ ಮಾಧ್ಯಮ ವ್ಯಾಕರಣ, ರಾಕ್ಷಸನ ಮುದ್ರಿಕೆ, ನಂಟರು ಇವರ ಪ್ರಮುಖ ಕೃತಿಗಳು. ಇವರು ಬರೆದಿರುವ ಭಾರತೀಯ ...
READ MORE