ಕವಿ ಎ.ಎಸ್. ಮಕಾನದಾರ ಅವರ ಶರಣ-ಸೂಫಿ-ವಚನಗಳ ಸಂಪಾದಿತ ಕೃತಿ-ಸಮರಸ ತಾಂಬೂಲ. ಸಮರಸ ತಾಂಬೂಲ ಕಲಕೇರಿಯ ಮಕಾನದಾರ ಬಂಧುಗಳಾದ ಶ್ರೀಮತಿ ದಿಲ್ ಶಾದ ಬೇಗಂ ಶ್ರೀ ಅಲ್ಲಾ ಬಕ್ಷಮಕಾನದಾರ ದಂಪತಿಗಳ ಮಗ ಬರಹಗಾರ ನೂರ್ ಅಹ್ಮದ್- ಕವಯಿತ್ರಿ ರಜಿಯಾ ಬೇಗಂ ಅವರ ವಿವಾಹ ಮಹೋತ್ಸವ ದ ನೆನಪಿಗಾಗಿ ಸಾಹಿತಿ ಎ ಎಸ್. ಮಕಾನದಾರ ಅವರ ಸಂಪಾದನೆ ಯಲ್ಲಿ ‘ಸಮರಸ ತಾಂಬೂಲ’ ಕೃತಿ ಪ್ರಕಟಿಸಲಾಗಿದೆ. ಕಲ್ಯಾಣ ಮಹೋತ್ಸವ ದಂತಹ ಸಂದರ್ಭದಲ್ಲಿ ವಚನ ತಾಂಬೂಲ ಪ್ರಕಟಿಸಿ ಅತಿಥಿ ಗಳಿಗೆ ಹಂಚುವ ಪರಿಪಾಠವಿತ್ತು ಎಂಬುದಕ್ಕೂ ಸಂಪ್ರದಾಯಿಕ ಇತಿಹಾಸವಿದೆ. ಅಹ್ಮದ್. ಮಕಾನದಾರ. ಪ್ರಕಾಶಕ ಫಾರೂಕ್ ಎ ಮಕಾನದಾರ. ಸಾಹಿತಿ ಎ ಎಸ್. ಮಕಾನದಾರರ ಕನಸುಗಳು ಈ ಮೂಲಕ ಸಾಕಾರಗೊಂಡಂತಾಗಿದೆ. ಬಾಬಾ ತಾಹೀರ್, ಸನಾಯಿ, ಬಾಬಾ ಶೇಖ್ ಫರೀದ್, ಲಲ್ಲಾ ಆರಿಫಾ, ರಾಬಿಯಾ, ಅಲ್ಹ್ ಜ್ ಮನ್ಸೂರ್, ರೂಮಿ ಮುಂತಾದವರ ಸೂಫಿ ಕಾವ್ಯ, ಅಲ್ಲಮ ಪ್ರಭು. ಚನ್ನಬಸವಣ್ಣ, ನೀಲಾಂಬಿಕೆ, ಗಂಗಾಂಬಿಕೆ,ನಾಗಲಾಂಬಿಕೆ , ಉರಿಲಿಂಗ ಪೆದ್ದಿ, ಆಯ್ದಕ್ಕಿ ಮಾರಯ್ಯ, ಮುಂತಾದವರ ವಚನಗಳಿವೆ. ಅಲ್ಲದೇ, ಮಾಜಿ ಶಾಸಕ ಎಸ್ ಎಸ್. ಪಾಟೀಲ್. ಪ್ರೂ. ಕೆ ಬಿ ಕರಿ ಭರಮ ಗೌಡರ, ವಿಶಾಲ ಸಂಗಣ್ಣವರ ಎ ಎಸ್. ಮಕಾನದಾರ ಫಾರೂಕ್ ಮಕಾನದಾರ ಮುಂತಾದವರ ಅಕ್ಷರ ತಾಂಬೂಲ ಓದಿಯೇ ಸೂಫಿ ಶರಣ ವಚನಗಳ ರಸ ಗವಳ ಆಸ್ವಾದಿಸಬೇಕು ಎಂಬುದು ಸಂಪಾದಕರ ಆಶಯ. ಗೌರವದ ಕಾಣಿಕೆಯೇ ಈ ಕೃತಿಯ ಬೆಲೆ ಎಂದು ಪ್ರಕಾಶಕರು ತಿಳಿಸುತ್ತಾರೆ.
©2024 Book Brahma Private Limited.