ನೇರ ನುಡಿಗೆ ನೂರು ವರುಷಗಳು

Author : ಜಯಪ್ರಕಾಶ ಮಾವಿನಕುಳಿ

Pages 192

₹ 110.00




Year of Publication: 2005
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪೀಕರ್ ಬೀದಿ, ಹುಬ್ಬಳ್ಳಿ -580020

Synopsys

ಹಿರಿಯ ಲೇಖಕ ಜಯಪ್ರಕಾಶ ಮಾವಿನಕುಳಿ ಸಂಪಾದಕತ್ವದ ’ನೇರ ನುಡಿಗೆ ನೂರು ವರುಷಗಳು’ ಕೃತಿಯು ಶಿವರಾಮ ಕಾರಂತರ ಸ್ಮೃತಿ ಸಂಪುಟವಾಗಿದೆ. ನಾಡಿನ ಉದ್ದಗಲಕ್ಕೂ ನಡೆದಾಡುತ್ತಾ, ನುಡಿಯುತ್ತಾ, ನುಡಿದಂತೆ ನಡೆಯುತ್ತಿದ್ದ ಕನ್ನಡದ ಜನಮನದ ಸಾಹಿತಿಯಾಗಿದ್ದ ಶಿವರಾಮ ಕಾರಂತರ ಜನ್ಮಶತಾಬ್ಧಿಯನ್ನು ಆಚರಿಸಿದ ಸಂದರ್ಭದಲ್ಲಿ ಹೊರಬಂದ ಕೃತಿ ಇದು.

ಅನೇಕ ಪತ್ರಿಕೆಗಳಲ್ಲಿ ಪ್ರಕಟವಾದ, ಸಭೆಗಳಲ್ಲಾದ ಭಾಷಣವನ್ನು ಇಲ್ಲಿ ಸಂಗ್ರಹಿಸಲಾಗಿದೆ. ಕಾರಂತರ ಜೀವನ ಮತ್ತು ಕೃತಿಯ ಆಧಾರಗಳ ಮೇಲೆ ಎರಡು ಭಾಗಗಳಾಗಿ ವಿಂಗಡಿಸಿದ್ದು, ಭಾಗ ಒಂದರಲ್ಲಿ ಕಾರಂತರನ್ನು ಕಂಡು ಮಾತನಾಡಿದ, ಅವನ ನೋವು ನಲಿವುಗಳನ್ನು ಹತ್ತಿರದಲ್ಲಿ ಕಂಡ, ಅವರ ಬಗ್ಗೆ ಬರೆದ ಲೇಖನಗಳಿವೆ. ಎರಡನೇ ಭಾಗದಲ್ಲಿ ಕಾರಂತರ ಕೃತಿಗಳ ಬಗ್ಗೆ ಬರೆದ ಲೇಖನಗಳಿವೆ. ಭಾಗ-1 ರಲ್ಲಿ; ಕಾರಂತರ ಕಡೆಗೊಂದು ಹೊರಳುನೋಟ (ಡಾ. ಜಿ. ಎಸ್. ಶಿವರುದ್ರಪ್ಪ), ಕಾರಂತ ಯುಗದ ದ್ವಂದ್ವ ಸಂದಿಗ್ಧಗಳು ( ಕೀರ್ತಿನಾಥ ಕುರ್ತಕೋಟಿ), ನನ್ನ ಪ್ರೀತಿಯ ಮುಂಗೋಪಿ ಅಪ್ಪ(ಉಲ್ಲಾಸ್ ಕಾರಂತ), ಮಗ ತೀರಿಕೊಂಡಾಗ ( ವ್ಯಾಸರಾಯ ಬಲ್ಲಾಳ), ಶಿವರಾಮ ಕಾರಂತ ಜನ್ಮ ಶತಾಬ್ದ ನೆನಪು ( ಸಿ.ಎನ್. ರಾಮಚಂದ್ರನ್), ನಮ್ಮ ಕಾರಂತರು (ಗೌರೀಶ ಕಾಯ್ಕಿಣಿ), ಕಾರಂತರೊಡನೆ ಕೆಲ ರಸನಿಮಿಷಗಳು ( ಕೆ. ಆರ್. ಹಂದೆ), ನನ್ನ ಆತ್ಮೀಯ ಹಿರಿಯರು (ಪ್ರಭುಶಂಕರ), ಕಾರಂತರ ಅಂತಃಕರಣ( ಶ್ರೀನಿವಾಸ ಹಾವನೂರ), ಹುಚ್ಚು ಮನಸ್ಸಿನಿಂದಾಚೆಗೆ ಹತ್ತಲ್ಲ ಹಲವು ಮುಖಗಳು (ಬಿ. ಎಸ್. ವೆಂಕಟಲಕ್ಷ್ಮಿ), ಕಾರಂತರೆಂದರೆ ಯಾರಂತ ತಿಳಿದಿರಿ? ( ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ), ಕಡಲ ಕರೆಯ ಕರ್ಮಯೋಗಿ (ರಾಮದಾಸ್), ದೈತ್ಯ ಪ್ರತಿಭೆಯ ಶಿವರಾಮ ಕಾರಂತರು( ಬಿ.ಎಸ್. ಕೇಶವ ರಾವ್), ಅವರು ಕೇವಲ ತಮಗೆ ಸರಿ ಕಂಡಂತೆ | ಬದುಕಿದರು (ಜಾನಕಿ), ಕೋಪಿಷ್ಟ ಕಾರಂತರ ಇನ್ನೊಂದು ಮುಖ (ದಿವಸ್ಪತಿ ಹೆಗಡೆ), ಸಾವು ಕಾಣದ ಮನೆಯ ಸಾಸಿವೆಯು ಬೇಕು (ಮನೋರಮಾ ಎಂ. ಭಟ್), ಕಾರಂತತನ ( ನರೇಂದ್ರ ರೈ ದೇರ್ಲ), ನಾನು ಸಾಹಿತಿಯಲ್ಲ-ಕಾರಂತ (ನಿ. ಮುರಾರಿ ಬಲ್ಲಾಳ), ಕಾಡಿದ ಕಾರಂತರು( ನಾವಡ/ಗಾಯತ್ರಿ ನಾವಡ), ಶಿವರಾಮ ಕಾರಂತರ ಸಂಪರ್ಕದಲ್ಲಿ(ಎಸ್. ಆರ್. ರೋಹಿಡೇಕರ), ಬಹು ಬಾಹು ಕಾರಂತ (ಶ್ಯಾಮ ಹುದ್ದಾರ), ಕೊಟ್ಟ ಮಾತು (ಬೋಳಂತಕೋಡಿ ಈಶ್ವರ ಭಟ್ಟ), ಕಾರಂತರ ಒಂದು ಮುಖ (ಬಿ. ಮಾಲಿನಿ ಮಲ್ಯ), ಕಾರಂತರು, ದೇವರು ಮತ್ತು ಮೂಕಜ್ಜಿ (ಎಂ. ಆರ್. ದತ್ತಾತ್ರಿ), ಖಾರಂತ ಕಾರಂತ (ಸರಜೂ ಕಾಟ್ಕರ್ ), ಕಾರಂತರು ಮತ್ತು ವ್ಯಕ್ತಿಚಿತ್ರ (ಸುಜಾತ ತೆಕ್ಕೆಮೂಲೆ), ಪುಸ್ತಕ ಪರಿಚಾರಕ ಶಿವರಾಮ ಕಾರಂತ (ಎಫ್. ಟಿ. ಹಳ್ಳಿಕೇರಿ, ಕೆ. ರವೀಂದ್ರನಾಥ), ಯೋಗಿಯ ಬೆರಗಿನ, ಮಗುವಿನ ಮುಗ್ಧತೆಯ ಶಿವರಾಮ ಕಾರಂತ (ಜಯಪ್ರಕಾಶ ಮಾವಿನಕುಳಿ) ಭಾಗ-2 ರಲ್ಲಿ; ಕಾರಂತ ಪ್ರಪಂಚಕ್ಕೊಂದು ಪ್ರವೇಶ (ಗಿರಡ್ಡಿ ಗೋವಿಂದರಾಜ), ಕಾರಂತ ಕಾದಂಬರಿಗಳ ಕಥನ ಮಾದರಿಗಳು (ಟಿ. ಪಿ. ಅಶೋಕ), ಕಾರಂತರ ಕಾದಂಬರಿಗಳಲ್ಲಿ ವೃದ್ಧೆಯರು ಮತ್ತು ಪರಿತ್ಯಕ್ತೆಯರು (ಸಬಿಹಾ), 'ಮೂಕಜ್ಜಿಯ ಕನಸುಗಳು' ವಿಭಿನ್ನ ಚಿಂತನೆಯಲ್ಲಿ ಮೂಡಿದ ಜೀವನದರ್ಶನ ( ವಿಜಯಾ ಸುಬ್ಬರಾಜ್), ಸಮೀಕ್ಷೆ:ಕಾರಂತರ ಒಂದು ಪ್ರಬುದ್ಧ ಕೃತಿ (ಬಿ. ವಿ. ಕೆದಿಲಾಯ), ಕಾರಂತರು ಮತ್ತು ಜೀವನ ಶ್ರದ್ಧೆ (ತಿರುಮಲ ಮಾವಿನಕುಳಿ), ಕಾರಂತರ ಬದುಕು - ಬರಹದಲ್ಲಿ ಪರಿಸರ ಪ್ರಜ್ಞೆ( ಪ್ರೊ. ವಿ. ಚಂದ್ರಶೇಖರ ನಂಗಲಿ), ಸಮೀಕ್ಷೆ ಮತ್ತು ಚಿಗುರಿದ ಕನಸು (ಮುನಿಯಾಲ್ ಗಣೇಶ ಶೆಣೈ), ಕಾರಂತರ ಶಿಕ್ಷಣ ಪ್ರಯೋಗಗಳು (ಜಯಪ್ರಕಾಶ ಮಾವಿನಕುಳಿ), ಕಾರಂತರು ಕೆತ್ತಿದ ಶಿಕ್ಷಣ ಶಿಲ್ಪ (ಸಿಬಂತಿ ಪದ್ಮನಾಭ ಕೆ. ವಿ).ಬರಹಗಳನ್ನು ಒಳಗೊಂಡಿವೆ.

 

About the Author

ಜಯಪ್ರಕಾಶ ಮಾವಿನಕುಳಿ
(05 May 1951)

ಸಾಹಿತಿ ಜಯಪ್ರಕಾಶ ಮಾವಿನಕುಳಿ ಅವರು ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯಿಕ ಕೃಷಿಯ ಜೊತೆಗೆ ನಾಟಕಕಾರರಾಗಿ, ರಂಗ ನಿರ್ದೇಶಕರಾಗಿ ಮತ್ತು ರಂಗಭೂಮಿ ಚಲನಚಿತ್ರ ನಟರಾಗಿಯೂ ಖ್ಯಾತಿ ಗಳಿಸಿದ್ದಾರೆ. ಕನ್ನಡ ಸಾಹಿತ್ಯಲೋಕಕ್ಕೆ ಹಲವು ನಾಟಕಗಳು, ಕಾದಂಬರಿ, ಸಣ್ಣಕತೆಗಳು, ಕಾವ್ಯ ಮತ್ತು ಇತರರೊಡನೆ ಹಲವು ಕೃತಿಗಳ ಸಂಪಾದನೆ ಸೇರಿದಂತೆ ಸುಮಾರು ಎಪ್ಪತ್ತು ಪುಸ್ತಕಗಳನ್ನು ನೀಡಿದ್ದಾರೆ. 1978ರಿಂದಲೂ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದು 4 ಕಥಾ ಸಂಕಲನಗಳು, 4 ಕವನ ಸಂಕಲನಗಳು, 7 ನಾಟಕಗಳು, 12 ಸಂಪಾದಿತ ಕೃತಿಗಳು ಹಾಗೂ ಇತರ ಕೃತಿಗಳೊಂದಿಗೆ 60ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. 'ಪೊಲಿಟಿಕ್ಸ್ ಆ್ಯಂಡ್ ಕಲ್ಚರ್' ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ. ...

READ MORE

Related Books