ಲೇಖಕ ಶ್ರೀನಿವಾಸ ದೇಸಾಯಿ ಅವರು ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗಗಳನ್ನು ಸಂಪಾದಿಸಿದ ಕೃತಿ ಇದು. ಚೌಪದಿಗಳ ಮೂಲಕ ಭಗವದ್ಗೀತೆಗಳ ಉಪದೇಶವನ್ನೂ ಸಹ ಮೀರುವಷ್ಟು ಪ್ರಭಾವಶಾಲಿಯಾಗಿ ಡಿವಿಜಿ ಅವರು ರಚಿಸಿದ ಕಗ್ಗಗಳು ಜೀವನ ದರ್ಶನವನ್ನು ನೀಡುತ್ತವೆ. ಅವುಗಳನ್ನು ಸಂಪಾದಿಸಿ ತಮ್ಮದೇ ಆದ ರೀತಿಯಲ್ಲಿ ತಾತ್ಪರ್ಯಗಳನ್ನು ಬರೆದು ಸಾಮಾನ್ಯ ಓದುಗರಿಗೆ ಸರಳ ಮಾಡಿ ನೀಡಿದ ಕೃತಿ ಇದು.
ಹಿರಿಯ ಲೇಕಖ ಶ್ರೀನಿವಾಸ ಕೃ. ದೇಸಾಯಿ ಅವರು ಕುವೆಂಪು ಅವರ ಶ್ರೀರಾಮಾಯಣ ದರ್ಶನದ ಮೇಲೆ ಆಳವಾದ ಅಧ್ಯಯನ ನಡೆಸಿದ್ದಾರೆ. ಅಲ್ಲದೇ 'ಕುವೆಂಪು ಅವರ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ – ಶ್ರೀ ದರ್ಶನ' ಎಂಬ ಸಂಕಲನವನ್ನು ಪ್ರಕಟಿಸಿದ್ದಾರೆ. ಜೊತೆಗೆ ಶ್ರೀಮದ್ ಭಗವದ್‌ಗೀತಾ ದರ್ಶನ ಎಂಬ ಕೃತಿಯನ್ನು ಸಂಪಾದಿಸಿದ್ದಾರೆ. ...
READ MORE