‘ಸಮವಸ್ತ್ರದೊಳಗೊಂದು ಸುತ್ತು’ ಸಂಪುಟ-3 ಕೃತಿಯು ಡಿ.ಸಿ ರಾಜಪ್ಪ ಅವರ ಕವನಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಸಾಹಿತ್ಯ ರಚನೆ, ಸೃಷ್ಟಿ ಬರೆಯುವ ಹವ್ಯಾಸ ಬರೀ ವರ್ಗಕ್ಕಷ್ಠೇ ಸೀಮಿತ ಎಂಬುದನ್ನು ಹುಸಿ ಮಾಡಿದಂತೆ ನನ್ನೆಲ್ಲಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಗೆಳೆಯರು ಅವಿರತ ಕರ್ತವ್ಯದ ಸಮಯದಲ್ಲೂ ಅವರೊಳಗಿರುವ ಕವಿಗೆ ಸಮಯ ಮಾಡಿಕೊಟ್ಟು ಮನುಜಪರ ಕಾಳಜಿಯೊಂದಿಗೆ ಮಾನವೀಯತೆಯನ್ನೂ ತೋರಿಸಿ ಉತ್ತಮವಾದ ಕವಿತೆಗಳನ್ನು ಬರೆದು ಕಳಿಸಿದ್ದಾರೆ. ಈ ಸಂಕಲನದಲ್ಲಿ 50ಕ್ಕೂ ಹೆಚ್ಚು ಜನ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಅತ್ಯುತ್ತಮವಾದ ಕವನಗಳನ್ನು ಆಯ್ಕೆ ಮಾಡಿ ಪ್ರಕಟಿಸಲಾಗಿದೆ ಎಂದು ಇಲ್ಲಿ ವಿಶ್ಲೇಷಿತವಾಗಿದೆ.