ಸ್ವಾತಿ ತಿರುನಾಳರ ಕೃತಿಗಳು ಎಂಬುದು ಲೇಖಕಿ ಎನ್.ಆರ್. ಶ್ರೀಲತಾ ಅವರು ಸಂಪಾದಿಸಿದ ಕೃತಿ. ಸಂಗೀತವನ್ನೇ ಪ್ರಧಾನವಾಗಿಸಿಕೊಂಡ ಈ ಕೃತಿಯು ಸ್ವಾತಿ ತಿರುನಾಳರ ಎಲ್ಲ ಕೃತಿಗಳ ಕುರಿತು ಸಂಕ್ಷಿಪ್ತವಾಗಿ ಪರಿಚಯಿಸುತ್ತದೆ. ಮೂಲತಃ ಕೇರಳದ ಸ್ವಾತಿ ತಿರುನಾಳ್ (1750-1850) ಪದ್ಮನಾಭಸ್ವಾಮಿಯ ಭಕ್ತರು. ಅವರನ್ನು ತ್ಯಾಗರಾಜ್ ಎಂದೇ ಕರೆಯಲಾಗುತ್ತಿತ್ತು. ತಿರುವನಾಂಕುರದಲ್ಲಿ ಜನಿಸಿದ ಸ್ವಾತಿ ತಿರುನಾಳ್, ಕೀರ್ತನೆಗಳು, ಪದ, ವರ್ಣ, ತಿಲ್ಲಾನ, ಪ್ರಬಂಧಗಳೆಂಬ ಐದು ಭಾಗಗಳಲ್ಲೂ ಪರಿಣಿತರು. ಜತಿಸ್ವರ, ಸ್ವರಜತಿ, ತಾನವರ್ಣ, ಪದವರ್ಣ, ನವರಾತ್ರಿ ಕೀರ್ತನೆಗಳು ಹೀಗೆ ಕೃತಿಗಳನ್ನು ರಚಿಸಿದ್ದು, ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಇವರ ಹೆಸರು ಅಜರಾಮರ.
©2024 Book Brahma Private Limited.