ವೃತ್ತಿಯಲ್ಲಿ ವೈದ್ಯರಿದ್ದು, ನಗೆ ಬರಹಗಳ ಮೂಲಕ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಡಾ. ರಾಶಿ ( ಎಂ. ಶಿವರಾಂ) ಅವರು 1947ರಲ್ಲಿ. ‘ಕೊರವಂಜಿ’ ಪತ್ರಿಕೆಯ ಮೂಲಕ ಹಾಸ್ಯ ಪತ್ರಿಕೋದ್ಯಮಕ್ಕೆ ಒಂದು ಆಯಾಮವನ್ನೇ ಒದಗಿಸಿದರು. ಸಾಹಿತ್ಯದಲ್ಲೂ ಹಾಸ್ಯಪ್ರಜ್ಞೆಯೊಂದಿಗೆ ನಗಲು ಕಲಿಸಿದವರು ರಾಶಿ. ಅವರದ್ದು ವಿಶಿಷ್ಟ್ಯ ಹಾಸ್ಯಪ್ರಜ್ಞೆ. ಕೈಲಾಸಂ, ನಾ. ಕಸ್ತೂರಿ, ಬೀಚಿ ಅವರ ಸಮಕಾಲೀನರಾದ ಅವರು, ತಮ್ಮದೇ ಶೈಲಿಯನ್ನು ರೂಢಿಸಿಕೊಂಡಿದ್ದವರು. ರಾಶಿಯವರ ಆಯ್ದ ನಗೆ ಬರಹಗಳನ್ನು ಅಪರಂಜಿ ಶಿವು ಅವರು ಸಂಪಾದಿಸಿರುವುದೇ ಈ ಕೃತಿ-ಬೆಸ್ಟ್ ಆಫ್ ಕೊರವಂಜಿ.
ಲೇಖಕ ಎಂ.ಶಿವರಾಂ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ- ರಾಮಸ್ವಾಮಯ್ಯ. ತಾಯಿ- ಸೀತಮ್ಮ. ಬೆಂಗಳೂರಿನಲ್ಲಿಯೇ ಶಿಕ್ಷಣ ಪಡೆದ ಅವರು ಎಂ.ಬಿ.ಬಿ.ಎಸ್ ಓದುತ್ತಿರುವಾಗಲೇ ತಂದೆ ತೀರಿಕೊಂಡಿದ್ದರಿಂದ ಸಂಸಾರದ ಜವಾಬ್ದಾರಿ ಹೊರಬೇಕಾಯ್ತು. ಈ ವೇಳೆ ಸಾಹಿತಿ ಕೈಲಾಸಂ ಅವರು ವೈದ್ಯರಾಗಿ ಸೇವೆಸಲ್ಲಿಸುವಂತೆ ಸಲಹೆ ನೀಡಿದ್ದರು. ಈ ಕಾರಣದಿಂದಾಗಿಯೇ ಬೆಂಗಳೂರು ಮೆಡಿಕಲ್ ಕಾಲೇಜು ಸ್ಥಾಪಿಸಿದ ಶಿವರಾಂ ಅವರು ಕೈಗಾರಿಕೋದ್ಯಮದಲ್ಲೂ ಸೇವೆ ಸಲ್ಲಿಸಿದ್ದಾರೆ. ಅನೇಕ ಸಂಘ ಸಂಸ್ಥೆಗಳೊಡನಾಟವಿದ್ದ ಅವರು ಇಂಡಸ್ಟ್ರಿಯಲ್ ಟೆಸ್ಟಿಂಗ್ ಲ್ಯಾಬೋರೇಟರಿಯ ನಿರ್ದೇಶಕರಾಗಿ, ಕಿರ್ಲೋಸ್ಕರ್ ಕಾರ್ಖಾನೆಯ ನಿರ್ದೇಶಕರಾಗಿ, ಮೈಸೂರು ಲ್ಯಾಂಪ್ಸ್, ಇಂಡಿಯನ್ ಆಕ್ಸಿಜನ್ ಕಂಪನಿಗಳ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೈಸೂರು ಕ್ಯಾನ್ಸರ್ ಸೊಸೈಟಿ ...
READ MORE