ವಿದ್ವಾನ್ ಎನ್. ರಂಗನಾಥ ಶರ್ಮ ಅವರ ಸಂಪಾದಿತ ಕೃತಿ-ಹದಿಬದೆಯ ಧರ್ಮ. ಬೆಂಗಳೂರಿನಲ್ಲಿ (2011) ನಡೆದ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಪ್ರಕಟಿಸಿರುವ ಕೃತಿ ಇದು. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಪೂಜ್ಯನೀಯ ಸ್ಥಾನಮಾನ ದೊರಕಿದ್ದೇ ಹದಿಬದೆಯ ಧರ್ಮದಂತಹ ಕೃತಿಗಳಿಂದ. ಮಗಳು, ಹೆಂಡತಿ, ತಾಯಿ, ಅಕ್ಕ., ತಂಗಿ ಹೀಗೆ ಬದುಕಿನ ಬಹುಪಾತ್ರಧಾರಿಯಾಗಿ ಅಷ್ಟೇ ಮೌಲಿಕತೆಯ ಅಗತ್ಯವನ್ನು ಪ್ರತಿಪಾದಿಸುವ ಹೆಣ್ಣು ಇಡೀ ಜೀವನದ ಕೇಂದ್ರವೇ ಆಗಿದ್ದಾಳೆ. ಗಂಡ-ಹೆಂಡತಿಯ ಧರ್ಮವೇನು? ಅದರ ಸ್ವರೂಪ ಹೇಗೆ? ಸಂಸಾರಿಕ ಧರ್ಮ ಹೇಗಿರಬೇಕು? ಇತ್ಯಾದಿ ಅಂಶಗಳ ಮೇಲೆ ಬೆಳಕು ಚೆಲ್ಲುವ ಕೃತಿ ಇದು. ಮೈಸೂರು ಅರಸ ಚಿಕ್ಕದೇವರಾಜರ ಕಾಲದಲ್ಲಿದ್ದ ಸಂಚಿಯ ಹೊನ್ನಮ್ಮ ಎಂಬ ಮಹಿಳೆ ಈ ಕೃತಿಯನ್ನು ರಚಿಸಿದ್ದಳು ಎಂದು ಹೇಳಲಾಗುತ್ತಿದೆ. ಈಕೆ ಎಳಂದೂರಿನವಳು. ಪಟ್ಟದರಸಿ ದೇವರಾಜಮ್ಮಣ್ಣಿಯ ಸ್ನೇಹದಿಂದ ಅವಳು ಅರಮನೆ ಪ್ರವೇಶಿಸುತ್ತಾಳೆ. ಈಕೆಯ ವಿದ್ವತ್ ಕಂಡುಕೊಂಡ ಅರಸಿ, ಕಾವ್ಯ ರಚಿಸಲು ಸೂಚಿಸಿದ್ದರ ಫಲವೇ-ಹದಿಬದೆಯ ಧರ್ಮ. ಸಂಚಿಯ ಹೊನ್ನಮ್ಮ ಕಾಲವಾಗಿ ಮುನ್ನೂರು ವರ್ಷಗಳು ಸಂದಿವೆ. ಆದರೆ, ಆಕೆಯ ಕಾವ್ಯ ಹೆಣ್ಣಿರುವವರೆಗೂ ಹೆಣ್ಣಿನ ಧರ್ಮವನ್ನು ಕಾಯುತ್ತಿರುತ್ತದೆ.
©2024 Book Brahma Private Limited.