ಡಾ. ಗುರುಪಾದ ಮರಿಗುದ್ದಿ ಅವರು ಸಂಪಾದಿಸಿರುವ "ನವೋದಯ ವೆಂಬ ತಂತಿಯ ಮಿಡಿದು" ಕೃತಿಯನ್ನು ಅವಲೋಕಿಸಿದಾಗ ಈ ಕೃತಿಯಲ್ಲಿ ಒಟ್ಟು 22 ವಿಮರ್ಶಾಲೇಖನಗಳು ಇದ್ದು. ಪಂಜೆ ಮಂಗೇಶರಾಯರ ತೆಂಕಣ ಗಾಳಿಯಾಟ ಕುರಿತು ಶ್ರೀಧರ್ ಹೆಗಡೆಯವರು, ಎಂ ಗೋವಿಂದ ಪೈ ಅವರ ಕವಿತೆ ಕುರಿತು ಶಶಿಕಲಾ ಮೊರಬದ ಅವರು,ಬಿ.ಎಂ.ಶ್ರೀಯವರ ಕನ್ನಡ ಹೆಣ್ಣು ಕುರಿತು ಡಾ.ಚನ್ನಪ್ಪ ಕಟ್ಟಿ ಅವರು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ನೀತಿ ಕುರಿತು ರಾಜಶೇಖರ್ ಜಮಖಂಡಿಯವರು, ದ.ರಾ.ಬೇಂದ್ರೆ ಅವರ ಅನಂತ ಪ್ರಣ ಯ ಕುರಿತು ಎಚ್.ಶಶಿಕಲಾ ಅವರು, ಡಿ.ಎಸ್. ಕರ್ಕಿ ಹಚ್ಚೇವು ಕನ್ನಡ ದೀಪ ಕುರಿತು ಡಾ. ಎಚ್. ಟಿ. ಪೋತೆ ಅವರು,ಪು.ತಿ.ನರಸಿಂಹಚಾರ್ಯ ನೆರಳು ಕುರಿತು ಡಾ. ಶ್ರೀಶೈಲ ನಾಗರಾಳ ಅವರು ಬರೆದ ವಿಮರ್ಶಾಲೇಖನಗಳು ಓದುಗರ ಗಮನ ಸೆಳೆಯುವ ನಿಟ್ಟಿನಲ್ಲಿ ರಚನೆಗೊಂಡಿವೆ. ಕಲಬುರ್ಗಿಯ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2021ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ ಒಟ್ಟು 208 ಪುಟಗಳು ಇದ್ದು,190 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
©2024 Book Brahma Private Limited.