ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತರ ಬರಹಗಳನ್ನು ಲೇಖಕಿ ಮಾಲಿನಿ ಮಲ್ಯ ಅವರು ಸಂಪಾದಿಸಿದ ಕೃತಿ ಇದು. ಕಾರಂತರು ಕಾಲಕಾಲಕ್ಕೆ ಬರೆದ ಬಿಡಿ ಲೇಖನಗಳು, ಬರೆಹಗಳು, ಚಿಂತನೆಗಳನ್ನು ಸಂಗ್ರಹಿಸಿದ್ದಾರೆ. ಕಾರಂತರ ಕುರಿತು ನಡೆಸುವ ಸಂಶೋಧನೆಗೆ ಈ ಕೃತಿಯು ಉತ್ತಮ ಆಕರ ಗ್ರಂಥವಾಗಲಿದೆ.
ಶಿವರಾಮ ಕಾರಂತರ ಬದುಕು ಬರಹಗಳನ್ನು ಕನ್ನಡ ಓದುಗರಿಗೆ ಉಣಬಡಿಸಿ, ಕಾರಂತರ ವೈಚಾರಿಕ ನೆಲೆ, ಜೀವನ ಪ್ರೀತಿಯನ್ನು ಮತ್ತಷ್ಟು ಅರ್ಥೈಸಿಕೊಳ್ಳುವಲ್ಲಿ ಕೊಡುಗೆ ನೀಡಿದವರು ಕಾದಂಬರಿಗಾರ್ತಿ ಮಾಲಿನಿ ಮಲ್ಯ .ಮೂಲತಃ ಉಡುಪಿಯವರು. ಭಾರತೀಯ ಜೀವವಿಮಾನಿಗಮದ ನಿವೃತ್ತ ಉದ್ಯೋಗಿ. ಕೃತಿಗಳು: ನಾನು ಕಂಡ ಕಾರಂತರು (ವ್ಯಕ್ತಿಚಿತ್ರ), ಗೊಂದಲಪುರದ ನಿಂದಲರು (ಕಾದಂಬರಿ), ದಾಂಪತ್ಯ ಗಾಥೆ (ಕಿರುಕಾದಂಬರಿ), ಶಿವರಾಮಕಾರಂತರ ಕಿನ್ನರಲೋಕ (ಲೇಖನ ಸಂಗ್ರಹ), ಚಿಣ್ಣರ ಲೋಕದಲ್ಲಿ ಕಾರಂತರು ಭಾಗ 1 ಮತ್ತು 2, ಸಾಹಿತ್ಯೇತರ ಕಾರಂತರು, ಕಾರಂತ ಉವಾಚ, ’ಶಿವರಾಮ ಕಾರಂತರ ವಾಙ್ಮಯ ವೃತ್ತಾಂತ, ಶಿವರಾಮ ಕಾರಂತರ ಕೃತಿ ಕೈಪಿಡಿ, ಶಿವರಾಮ ಕಾರಂತರ ಲೇಖನಗಳು-8 ಸಂಪುಟಗಳು, ಪಕ್ಷಿಗಳ ಅದ್ಭುತ ...
READ MORE