ಎಚ್ ವೈ ಶಾರದಾ ಪ್ರಸಾದ್ ಅವರ ’ಕಾಲ ದೇಶ’ ಕೃತಿಯು ವಿಶ್ವೇಶ್ವರ ಭಟ್ ಅವರ ಸಂಪಾದಿತ ಲೇಖನ ಸಂಕಲನವಾಗಿದೆ. ಶಾರದಾ ಪ್ರಸಾದ್ ಮೈಸೂರಿನವರು, ಅಪ್ಪಟ ಕನ್ನಡಿಗರು ಎಂಬುದನ್ನು ಇಲ್ಲಿ ಭಿನ್ನವಾಗಿ ತೋರಿಸಿದ್ದಾರೆ ಲೇಖಕ ವಿಶ್ವೇಶ್ವರ ಭಟ್. ಹಲವಾರು ವರ್ಷ ಪ್ರಧಾನ ಮಂತ್ರಿಗಳ ಕಛೇರಿಯಲ್ಲಿ ಕೆಲಸ ನಿರ್ವಹಿಸಿದವರು. ಸ್ವಲ್ಪ ಸಮಯ ಸಿಕ್ಕರೂ ಏನಾದರೂ ಸಾಹಿತ್ಯ ಚಟುವಟಿಕೆಗಳಲ್ಲಿ ನಿರತರಾಗುತ್ತಿದ್ದರು. ಕನ್ನಡದ ಹಲವಾರು ಪ್ರಮುಖ ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಆಕರ್ಷಕ ಸಮಚಿತ್ತದ ಬರವಣಿಗೆ ಅವರದು. ಶಾರದಾ ಪ್ರಸಾದ್ ಅವರು ವ್ಯಕ್ತಪಡಿಸಿರುವ ವಿಚಾರಗಳು ಸಮಕಾಲೀನ ಹಾಗೂ ಪ್ರಸ್ತುತವಾಗಿದ್ದು ಈ ಕೃತಿಯಲ್ಲಿ ಎಚ್ ವೈ ಶಾರದಾ ಪ್ರಸಾದ್ ಅವರ ಬರಹಗಳ ಅನುವಾದವಾಗಿದೆ. ಕೃತಿಯ ಬೆನ್ನುಡಿಯಲ್ಲಿ ಕೇಂದ್ರದ ಮಾಜಿ ಸಚಿವ ನಟವರ್ ಸಿಂಗ್ ಅವರು, ಶಾರದಾ ಪ್ರಸಾದ್ ನಿಜಕ್ಕೂ ಗ್ರೇಟ್ ಮನುಷ್ಯ ಅವರು ಅಪ್ಪಟ ಗಾಂಧಿವಾದಿ. ಬಹಳ ವರ್ಷಗಳ ಕಾಲ ದಿಲ್ಲಿಯಲ್ಲಿ ಅವರಿಗೊಂದು ಸ್ವಂತ ಮನೆ ಇರಲಿಲ್ಲ. ಈ ವಿಷಯ ಹೇಗೊ ಸೋನಿಯಾ ಗಾಂಧಿಯವರಿಗೆ ಗೊತ್ತಾಯಿತು. ಶಾರದಾ ಪ್ರಸಾದ್ ಅವರಿಗೆ ಕಡಿಮೆ ಬಾಡಿಗೆ ಸರಕಾರಿ ಮನೆ ನೀಡುವಂತೆ ಅವರು ಸೂಚಿಸಿದರು. ತಮಗೆ ಇಂಥ ಮನೆ ಕೊಡಿಸಿ ಎಂದು ಸೋನಿಯಾ ಮುಂದೆ ಏನಿಲ್ಲವೆಂದರೂ ಹತ್ತು ಸಾವಿರ ಮಂದಿ ಅರ್ಜಿ ಹಿಡಿದು ನಿಂತಿರಬಹುದು. ಆದರೆ ಶಾರದಾಪ್ರಸಾದ್ ಬಹಳ ವಿನಯ ಪೂರ್ವಕವಾಗಿ ಇದನ್ನು ತಿರಸ್ಕರಿಸಿದರು. ನೈಟು ನೀಡಲು ಸರಕಾರ ಮುಂದೆ ಬಂದಾಗಲೂ ಅವರು ತೆಗೆದುಕೊಳ್ಳಲಿಲ್ಲ. ಇಂಥ ವ್ಯಕ್ತಿಗಳು ಈ ಕಾಲದಲ್ಲಿ ಇದ್ದಾರೆ ಅಂದ್ರೆ ನಂಬುವುದು ಕಷ್ಟ. ಅವರೆಂಥ ಸರಳ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ನೋಡಲು ಅವರ ಮನೆಗೊಮ್ಮೆ ಹೋಗಬೇಕು ಎಂದಿದ್ದಾರೆ.
©2024 Book Brahma Private Limited.