ಹಿರಿಯ ಪತ್ರಕರ್ತ ಹಾಗೂ ಲೇಖಕ ಶಿಕಾರಿಪುರ ಈಶ್ವರ ಭಟ್ ಅವರ ಎರಡನೇ ಕೃತಿ ಮಹಾಭಾರತ ಪಾತ್ರಾನುಸಂಧಾನ. ಈ ಕೃತಿಯ ಸಂಗ್ರಾಹಕರು ಹಾಗೂ ಲೇಖಕರಾಗಿ ಈಶ್ವರ ಭಟ್ ಅವರು ಕಾರ್ಯ ನಿರ್ವಹಿಸಿದ್ದಾರೆ. ಹಿರಿಯ ಪತ್ರಕರ್ತರು ದು.ಗು.ಲಕ್ಷ್ಮಣ ಅವರು ಕೃತಿಯಲ್ಲಿ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಬನ್ನಂಜೆ ಗೋವಿಂದಾಚಾರ್ಯರ ಮಹಾಬಾರತ ಕುರಿತ ಪ್ರವಚನಗಳನ್ನು ಲೇಖನಗಳನ್ನಾಗಿಸಿ, ಅದನ್ನೀಗ ‘ಮಹಾಭಾರತ ಪಾತ್ರಾನುಸಂಧಾನ’ ವನ್ನಾಗಿಸಿ, ಕೃತಿರೂಪಕ್ಕಿಳಿಸಿರುವುದು ಮೆಚ್ಚುಗೆ ವಿಚಾರ ಎಂಬುದಾಗಿ ಹೇಳಿದ್ದಾರೆ. ಕೃತಿಯ ಪರಿವಿಡಿಯಲ್ಲಿ ಬನ್ನಂಜೆ: ನಮುಡಿನಮನ-ಅಕ್ಷರಾಂಜಲಿ, ಪ್ರವಚನ-”ಅನುಸಂಧಾನ” ವಾದ ಬಗೆ…, ಮಹಾಭಾರತ: ಸುತ್ತ-ಮುತ್ತ…, ಬೆಸ್ತಕುಲ ಸಂಜಾತ “ವೇದವ್ಯಾಸ”, ಶ್ರೀಕೃಷ್ಣನ ದ್ವಾರಕಾ ಉತ್ಖನನ…, ಧೀರ ಮಹಿಳೆ-ವೀರ ಮಾತೆಕುಂತಿ, ದುರಂತ ನಾಯಕಿ:ಮಾದ್ರಿ, ಪತಿವ್ರತಾ- ಸತ್ಯವಾದಿನಿ: ಗಾಂಧಾರಿ, ವಿದುರ ಗೀತ-ಹಿತೋಪದೇಶ, ವಿದುರ ನೀತಿ-ಸಂಖ್ಯಾರ್ಥ ಚಿಂತನ ಸೇರಿದಂತೆ ಅನೇಕ ಶೀರ್ಷಿಕೆಗಳ ಲೇಖನಗಳಿವೆ.
©2024 Book Brahma Private Limited.