ಅನಿಕೇತನ-ಶೈಕ್ಷಣಿಕ ಲೇಖನಗಳ ಸಂಪಾದಿತ ಕೃತಿ. ಡಾ. ಶರಣಬಸಪ್ಪ ವಡ್ಡನಕೇರಿ ಸಂಪಾದಕರು. ಮಾಳಪ್ಪ ಪೂಜಾರಿ ಪ್ರಧಾನ ಸಂಪಾದಕರು. ಮಗು ಹುಟ್ಟಿದಂದಿನಿಂದ ಶಿಕ್ಷಣವು ಪ್ರಾರಂಭವಾಗುತ್ತದೆ ಎಂಬುದು ಮನೋವಿಜ್ಞಾನಿಗಳ ಅಭಿಪ್ರಾಯ. ಆದರೆ ಇದನ್ನು ಜನರು ನಂಬಿರಲಿಲ್ಲ. 19ನೇ ಶತಮಾನದವರೆಗೆ ಶಿಕ್ಷಣಕ್ಕೆ ಮನೋಜ್ಞಾನವನ್ನು ಅನ್ವಯಿಸಿದಾಗಿನಿಂದ ಜನರಲ್ಲಿ ಹೊಸ ಹೊಸ ವಿಚಾರಗಳು ಮೂಡಲಾರಂಭಿಸಿದವು.ಕಾರಣ, 3-5 ವರ್ಷಗಳ ಮಗುವಿನ ಬೆಳವಣಿಗೆಯ ಅವಧಿಯ ಶಿಕ್ಷಣಕ್ಕೆ ಯೋಗ್ಯವೆಂದು ಹೇಳುತ್ತಿದ್ದಾರೆ. ಏಕೆಂದರೆ ಮಗುವಿನ ಮಾನಸಿಕ ಬೆಳವಣಿಗೆಯೂ 20 ವರ್ಷಗಳವರೆಗೆ ಮಾತ್ರ ಸಾಧ್ಯ. ತನ್ನಮಿತ್ತ ಪೂರ್ವ ಪೂರ್ವ ಪ್ರಾಥಮಿಕ ಶಾಲೆಯ ಕಲ್ಪನೆಯೂ ನಮ್ಮ ದೇಶದಲ್ಲಿ ಬರಬೇಕಾದರೆ ಹತ್ತಾರು ದಶಕಗಳನ್ನು ತೆಗೆದುಕೊಂಡಿತು. ಅಂದರೆ 1970 ರಿಂದೀಚೆಗೆ, ಇದರ ಪರಿಕಲ್ಪನೆ ದೇಶದ ತುಂಬೆಲ್ಲ ಹರಡಿದೆ.
ಅಂದಿನಿಂದ ಅಲ್ಲೊಂದು-ಇಲ್ಲೊಂದು ಪೂರ್ವ ಪ್ರಾಥಮಿಕ ಪ್ರಾಥಮಿಕ ಶಾಲೆಗಳು ಮೊದಲು ಮತ್ತು ಪಟ್ಟಣಗಳಲ್ಲಿ ಪ್ರಾರಂಭವಾಗಿ ಈಗ ಹಳ್ಳಿಹಳ್ಳಿಗಳಿಗೂ ಶಾಲೆಯ ಪ್ರಾಮುಖ್ಯತೆ ಪಸರಿಸಿದೆ. ಈ ಅಂಶಗಳ ಮಹತ್ವವನ್ನು ವಿವರಿಸುವ ಕೃತಿ ಇದು. ಮಕ್ಕಳ ಆರೋಗ್ಯ ಮತ್ತು ಶುಚಿತ್ವ, ಕನ್ನಡ ಅಕ್ಷರಗಳ ವೈ ಶಿಷ್ಟ,ಶಾಲಾ ಕಾಲೇಜುಗಳಲ್ಲಿ ಪಠ್ಯೇತರ ಚಟುವಟಿಕೆಗಳ ಮಹತ್ವ,ದೈಹಿಕ ಶಿಕ್ಷಣದ ಮಹತ್ವ, ಮಕ್ಕಳಲ್ಲಿ ವೈಜ್ಞಾನಿಕ ಪ್ರವೃತ್ತಿ ಬೆಳೆಸುವಲ್ಲಿ ಶಿಕ್ಷಕನ ಪಾತ್ರ, ಮಕ್ಕಳನ್ನು ಶಿಕ್ಷಿಸುವ ಮುಂಚೆ ಸ್ವಲ್ಪ ಆಲೋಚಿಸಿ, ಜನಪದರಲ್ಲಿ ಮಾತೃತ್ವದ ಪರಿಕಲ್ಪನೆ,ಪರೀಕ್ಷೆಗಳಲ್ಲಿ ಪ್ರಶ್ನೆಗಳು ಹೇಗಿರಬೇಕು, ತರಗತಿ ಕೋಣೆಯಲ್ಲಿ ಶಿಕ್ಷಕ,ಶಿಸ್ತುಬದ್ಧ ಶಿಕ್ಷಣದ ಅವಶ್ಯಕತೆ, ಶಿಕ್ಷಕ ವೃತ್ತಿಯ ಪಾವಿತ್ರತೆ,ಶಿಕ್ಷಕ ವೃತ್ತಿಯ ಪಾವಿತ್ರ್ಯತೆ ಮಕ್ಕಳ ದೃಷ್ಟಿಯಲ್ಲಿ. ಹೀಗೆ ಹತ್ತು ಹಲವಾರು ಶೈಕ್ಷಣಿಕ ಲೇಖನಗಳು ಈ ಪುಸ್ತಕ ಒಳಗೊಂಡಿದೆ.
©2024 Book Brahma Private Limited.