ಗ್ರಂಥಾಲಯ ಇತಿಹಾಸ

Author : ವೀರೇಶ ಜಾಲಿಕಟ್ಟಿ

Pages 76

₹ 120.00




Year of Publication: 2022
Published by: ಬಿ.ಜಿ ಪ್ರಿಂಟರ್‍ಸ್
Address: ಧಾರವಾಡ
Phone: 9035627808

Synopsys

‘ಸಂಕ್ಷಿಪ್ತ ಗ್ರಂಥಾಲಯ ಇತಿಹಾಸ’ ಎಸ್.ಆರ್. ಗುಂಜಾಳ ಕೃತಿಯು ಈರಪ್ಪ ಬಸವರಾಜ ಜಾಲಿಕಟ್ಟಿ (ವೀರೇಶ ಜಾಲಿಕಟ್ಟಿ) ಅವರ ಕೃತಿಯಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಇದೀಗ ನಮ್ಮ ಮುಂದಿರುವ ಗ್ರಂಥಾಲಯ ಇತಿಹಾಸ ಕೃತಿ ಡಾ. ಗುಂಜಾಳ ಅವರ ಗಾಢ ಸಂಶೋಧನೆ ಮತ್ತು ವಿಸ್ತೃತ ಕ್ಷೇತ್ರಾನುಭವಕ್ಕೆ ಹಿಡಿದ ಕನ್ನಡಿ. ಅವರು ಮುನ್ನುಡಿಗಾಗಿ ನನಗೆ ಬರೆದಿದ್ದ ಪತ್ರದಲ್ಲಿ “ಇದು ಕೈ ಬರಹದಲ್ಲಿ ಹಾಗೆಯೇ ಉಳಿದು ಹೋಗಿತ್ತು ಎಂದಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಕೃತಿಯ ಮೊದಲ ವಿಷಯದಲ್ಲಿ- ಗ್ರಂಥ-ಗ್ರಂಥಾಲಯಗಳ ಲಕ್ಷಣ ನಿರೂಪಣೆಯಿಂದ ಹಿಡಿದು, ಪ್ರಾಚೀನ ಕಾಲದಿಂದಲೂ ಇದುವರೆಗೆ ಅಸ್ತಿತ್ವದಲ್ಲಿರುವ ಗ್ರಂಥಾಲಯ ವ್ಯವಸ್ಥೆ, ಅದರ ಸ್ವರೂಪ ಮತ್ತು ಬೆಳವಣಿಗೆಗಳನ್ನು ವಿವರಿಸಿದ್ದಾರೆ. ಎರಡನೆಯ ವಿಷಯ- 'ಗ್ರಂಥಾಲಯದ ಐತಿಹಾಸಿಕ ಹಿನ್ನೆಲೆ ಇದರಲ್ಲಿ ಕ್ರಿ. ಪೂರ್ವದಲ್ಲಿ ಏಳು ಲಕ್ಷದಷ್ಟು ಹಸ್ತಪ್ರತಿಗಳಿದ್ದ ಗ್ರೀಕ್ ದೇಶದ ಟಾಲಮಿ ಚಕ್ರವರ್ತಿಯ ಗ್ರಂಥ ಭಂಡಾರವನ್ನು ರೋಮನ್ ಚಕ್ರವರ್ತಿ ದಾಳಿ ನಡೆಸಿದಾಗ ಸುಡಿಸಿದ ಸಂಗತಿ, ಪ್ರಾಚೀನ ಭಾರತದಲ್ಲಿ ಅರುವತ್ತನಾಲ್ಕು ವಿದ್ಯೆಗಳಲ್ಲಿ ಗ್ರಂಥ ವಾಚನವೂ ಒಂದಾಗಿದ್ದುದು, ಭಾರತದ ಪ್ರಾಚೀನ ವಿಶ್ವವಿದ್ಯಾಲಯಗಳಾದ ನಲಂದಾ, ಮಿಥಿಲಾ, ತಕ್ಷಶಿಲಾದಂತಹ ವಿಶ್ವಪ್ರಸಿದ್ಧ ವಿಶ್ವವಿದ್ಯಾಲಯಗಳ ಗ್ರಂಥ ಭಂಡಾರಗಳಿಂದ ವಿದೇಶೀಯರು ಮೌಲಿಕ ಗ್ರಂಥಗಳನ್ನು ಒಯ್ದುರು, ಶುರ್ಕರ ದಾಳಿಯಿಂದ ಟಿಬೆಟ್ಟಿನ ಗಂಥಾಲಯ ನಾಶವಾದದ್ದು, ಭಾರತೀಯ ಗ್ರಂಥ ಭಂಡಾರದ ಬಗೆಗೆ ಚೀನಿ ಮತ್ತು ಪಾಶ್ಚಿಮಾತ್ಯ ಪ್ರವಾಸಿಗರ ದಾಖಲೆ ಇತ್ಯಾದಿ ಜಾಂತಿಕ ಸಂಗತಿಗಳನ್ನು ನಿರೂಪಿಸಲಾಗಿದೆ. ಭಾರತದಲ್ಲಿ ಗ್ರಂಥಾಲಯದ ಉಗಮ ಕುರಿತ ಮೂರನೆಯ ಸಮಯದಲ್ಲಿ - ವಿದೇಶಿ ಪ್ರವಾಸ ಏವಾಸದಿಂದ ಪ್ರಭಾವಿತರಾಗಿ ಬರೋಡ ಮಹಾರಾಜರು 1912 ರಷ್ಟು ಹಿಂದೆ ತಮ್ಮ ಪ್ರಭುತ್ವದಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಿದ್ದು, 924ರಲ್ಲಿ ಭಾರತದ ಗ್ರಂಥಾಲಯ ಪಿತಾಮಹರೆಂದೇ ಹೆಸರಾಗಿದ್ದ ಎಸ್. ಆರ್. ರಂಗನಾಥನ್ ಅವರು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ಆರಂಭಿಸಿದ್ದು, ನಂತರ ದೇಶದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಗ್ರಂಥಾಲಯ ವಿಷಯ ಶಿಕ್ಷಣಕ್ಕೆ ಅವಕಾಶವಾದದ್ದು, 1900ರಲ್ಲಿ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾನೂನು ಜಾರಿಗೆ ಬಂದದ್ದು-ಇವನ್ನೆಲ್ಲ ತಿಳಿಸಲಾಗಿದೆ. ಕೃತಿಯ ನಾಲ್ಕನೆಯ ವಿಷಯ -ಗ್ರಂಥಾಲಯ ಮತ್ತು ಕರ್ನಾಟಕದ ಅರಸರು, ಇದರಲ್ಲಿ ಪ್ರಾಚೀನ ಅಗ್ರಹಾರಗಳು, ಮಠಗಳು, ದೇವಾಲಯಗಳು, ಘಟಕಾ ಸ್ಥಾನಗಳು ವಿದ್ಯಾ ಕೇಂದ್ರಗಳಾಗಿದ್ದು, ಅವುಗಳಿಗೆ ಹೊಂದಿಕೊಂಡಂತೆ ಗ್ರಂಥಾಲಯಗಳಿದ್ದುದು, ಕದಂಬರ ಕಾಲದಿಂದ ವಿಜಯನಗರದ ಅರಸರ ಕಾಲದವರೆಗೆ ವಿದ್ಯೆ-ಗ್ರಂಥಾಲಯಗಳಿಗಿದ್ದ ಪೋಷಣೆ, ಚಾಲುಕ್ಯ ತ್ರೈಲೋಕ ಮಲ್ಲಿದೇವ, ವಿಜಯನಗರದ ಇಮ್ಮಡಿ ಬುಕ್ಕರಾಯನ ಕಾಲದ ಗ್ರಂಥ ಭಂಡಾರಗಳು, ಗ್ರಂಥ ಭಂಡಾರದ ಜೀರ್ಣೋದ್ಧಾರಕ್ಕೇ ದತ್ತಿಕೊಟ್ಟಿರುವ ಶಾಸನಗಳು – ಮೊದಲಾದ ಸಂಗತಿಗಳನ್ನು ದಾಖಲಿಸಲಾಗಿದೆ. ಐದನೇ ವಿಷಯ ಒಂದು ವಿಶೇಷ. ಅದು 12ನೆಯ ಶತಮಾನದ ವಚನ ಭಂಡಾರಕ್ಕೆ ಸಂಬಂಧಿಸಿದ್ದು, ಅದುವರೆಗಿನ ಗ್ರಂಥ ಭಂಡಾರಗಳು ವಿದ್ಯಾ ಕೇಂದ್ರಗಳಿಗಷ್ಟೇ, ಪಂಡಿತರಿಗಷ್ಟೇ ಸೀಮಿತವಾಗಿದ್ದರೆ, ಶಾಂತರಸನ ವಚನ ಭಂಡಾರ ಜನಸಾಮಾನ್ಯರಿಗೂ ಮುಕ್ತವಾದ ಸಾರ್ವಜನಿಕ ಗ್ರಂಥ ಭಂಡಾರವಾಗಿ ತುಂಬ ಪರಿಣಾಮಕಾರಿಯಾಗಿದ್ದುದನ್ನು ತಿಳಿಸಿ, ಅದು 'ಭಾರತದ ಪ್ರಪ್ರಥಮ ಸಾರ್ವಜನಿಕ ಗ್ರಂಥಾಲಯ' ಎಂದು ಡಾ. ಗುಂಜಾಳ ಅವರು ಕರೆದಿರುವುದು ಪೂರ್ಣ ಸಮರ್ಥವಾಗಿದೆ.

About the Author

ವೀರೇಶ ಜಾಲಿಕಟ್ಟಿ

ವೀರೇಶ ಜಾಲಿಕಟ್ಟಿ ಕಾವ್ಯನಾಮದ ಈರಪ್ಪ ಬಸವರಾಜ ಜಾಲಿಕಟ್ಟಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗುಂಡ್ಲೂರಿನವರು. ಬಿ. ಎ, ಕನ್ನಡದಲ್ಲಿ ಎಮ್.ಎ ವಿದ್ಯಾರ್ಹತೆಯನ್ನು ಹೊಂದಿರುವ ಅವರು ಡಿಪ್ಲೋಮಾ ಇನ್ ಕಂಪ್ಯೂಟರ್ ಅಫ್ಲಿಕೇಶನ್ಸ್ ಪಡೆದಿರುತ್ತಾರೆ. ಚಿತ್ರಕಲೆ, ಕವಿತೆ, ಲೇಖನಗಳನ್ನು ಬರೆಯುವುದು, ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಡುವುದು, ಕವಿಗೋಷ್ಠಿ, ವಿಚಾರಗೋಷ್ಠಿ ನಡೆಸುವುದು ಅವರ ಹವ್ಯಾಸ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಪರೇಟರ್ ಕಮ್ ಕ್ಲರ್ಕ್ ಆಗಿ ಒಂದು ವರ್ಷ ಸೇವೆ ಸಲ್ಲಿಸಿರುತ್ತಾರೆ. ಧಾರವಾಡದ ಸ್ಪರ್ಧಾಸ್ಪೂರ್ತಿ ಕನ್ನಡ ಮಾಸಪತ್ರಿಕೆಯಲ್ಲಿ ನಾಲ್ಕು ವರ್ಷ ಸಂಪಾದಕೀಯ ಸಹಾಯಕನಾಗಿ ಸೇವೆ ಸಲ್ಲಿಸಿದ್ದಾರೆ. ಸಂಯುಕ್ತ ಕರ್ನಾಟಕ ...

READ MORE

Related Books