ವನ್ಯಜೀವಿಗಳ ಸಂಕುಲವನ್ನು ಮಾನವ ನಾಶ ಮಾಡುತ್ತಿರುವುದು ಮತ್ತೆ ಮತ್ತೆ ಸುದ್ದಿಯಲ್ಲಿರುವ ವಿಷಯ. ಆದರೆ ಈ ಹಲವು ವೈವಿಧ್ಯತೆಗಳು ಎಷ್ಷರ ಮಟ್ಟಿಗೆ ನಾಶವಾಗಿದೆ? ಆ ನಾಶಕ್ಕೆ ಕಾರಣಗಳೇನು? ಎಂಬುದರ ಜೊತೆಗೆ ಮಾನವ ಈ ರೀತಿ ಕಬಳಿಸುವುದರಿಂದ ಮನುಕುಲದ ಪರಿಸರದ ನಾಶಕ್ಕೆ ಹೇಗೆ ದಾರಿಯಾದೀತು ಎಂಬ ಕಳಕಳಿಯನ್ನು ವಿಷಯತಜ್ಞರು ಬಾನುಲಿಯಲ್ಲಿ ಚರ್ಚಿಸಿದ್ದರು. ಹೀಗೆ ಪ್ರಸಾರವಾದ ಸಂವಾದವನ್ನು ಈ ಕೃತಿಯಲ್ಲಿ ನೀಡಲಾಗಿದೆ.
ಲೇಖಕ ಟಿ. ಎಸ್. ಗೋಪಾಲ್ ಅವರ ಹೆಸರು ತಿರು ಶ್ರೀನಿವಾಸಾಚಾರ್ಯ ಗೋಪಾಲ್. ಕನ್ನಡ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನ ಕುರಿತ ಪುಸ್ತಕಗಳನ್ನು ಬರೆದಿದ್ದಾರೆ. ಅವರ 'ಕಾಡು ಕಲಿಸುವ ಪಾಠ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ (2013) ದೊರೆತಿದೆ. ಮೈಸೂರು ವಿಶ್ವವಿದ್ಯಾಲಯದಿಂದ ಬಿ. ಎ. ಹಾಗೂ ಎಂ. ಎ. ಪದವಿ (ಚಿನ್ನದ ಪದಕ) ಪಡೆದಿರುವ ಅವರು ದಕ್ಷಿಣ ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಕೊಡಗು ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಅವರು ...
READ MORE