‘ಜೋಗಿ ರೀಡರ್’ ಕೃತಿಯು ಸಂಧ್ಯಾರಾಣಿ ಅವರ ಸಂಪಾದಿತ ಬರವಣಿಗೆಯ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಜೋಗಿ ಕನ್ನಡ ಸಾರಸ್ವತ ಲೋಕದ ವಿಸ್ಮಯವಾಗಿದ್ದು, ವಿಶಿಷ್ಟ ಬರಹಗಾರರು ಕೂಡಾ ಹೌದು. ಜೋಗಿಯವರ ಸೃಜನಶೀಲ ಕೆಲಸಗಳು ಒಂದಲ್ಲ, ಎರಡಲ್ಲ ಹತ್ತಾರು ಕವಿ, ಕಥೆಗಾರ, ಕಾದಂಬರಿಕಾರ, ವಾಗ್ಮಿ ಮತ್ತು ಹಲವು ಧಾರಾವಾಹಿಗಳ ಸ್ಕ್ರಿಪ್ಟ್ ರೈಟರ್, ಅಲ್ಲದೆ ಪತ್ರಿಕೆಗಳಲ್ಲಿ ರೆಗ್ಯುಲರ್ ಅಂಕಣಕಾರ. ಈ ಎಲ್ಲಾ ಸೃಜನಶೀಲ ಅವತಾರಗಳ ನಡುವೆ ದಣಿವರಿಯದ ಲೇಖಕ ಕೂಡ. ಜೋಗಿ ಬರಹಗಳಿಗೆ ದಿಕ್ಸೂಚಿಯಾಗುವ ‘ಜೋಗಿ ವಾಚಿಕೆ’ಯನ್ನು ಸಂಧ್ಯಾರಾಣಿಯವರು ಇಲ್ಲಿ ಅರ್ಥಪೂರ್ಣವಾಗಿ ಸಂಪಾದಿಸಿಕೊಟ್ಟಿದ್ದಾರೆ.
ಪತ್ರಕರ್ತೆ, ಲೇಖಕಿ, ಸಿನಿಮಾ ವಿಮರ್ಶಕಿ ಸಂಧ್ಯಾರಾಣಿ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆಯವರು. ಚಿನ್ನದ ಗಣಿ ಕೆ.ಜೆ.ಎಫ್‌ನಲ್ಲಿ ಪದವಿ ಶಿಕ್ಷಣ ಪಡೆದಿರುವ ಇವರು ಪ್ರಸ್ತುತ ಹವ್ಯಾಸಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ಕೆಲವು ಇ-ಪತ್ರಿಕೆಗಳ ಅಂಕಣಕಾರ್ತಿಯಾಗಿರುವ ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ಯಾಕೆ ಕಾಡುತಿದೆ ಸುಮ್ಮನೆ(ಅಂಕಣ ಬರಹಗಳು), ತುಂಬೆ ಹೂ (ಜೀವನ ಚರಿತ್ರೆ), ಪೂರ್ವಿ ಕಲ್ಯಾಣಿ (ನಾಟಕ) ಮುಂತಾದವು. ರಾಷ್ಟ್ರ ಪ್ರಶಸ್ತಿ ವಿಜೇತ ನಾತೀಚರಾಮಿ ಸಿನಿಮಾಕ್ಕೆ ಚಿತ್ರಕತೆ ಬರೆದಿದ್ದರು. ...
READ MORE