ಮಹಾತ್ಮರ ಜೀವನದಿಂದ ಪ್ರಭಾವಿತರಾದ ಪ್ರೇಮಚಂದ ಅವರು ಹಿಂದಿ ಸಾಹಿತ್ಯದಲ್ಲಿ ಅಪ್ರತಿಮರು. ಕಲೆಗಾಗಿ ಕಲೆಯಲ್ಲ; ಕಲೆ ಜೀವನಕ್ಕಾಗಿ ಎಂದು ನಂಬಿದವರು. ಹಾಗೆಯೇ, ಸಾಹಿತ್ಯವನ್ನು ಸೃಷ್ಟಿಸಿದವರು. ಸಾಹಿತ್ಯವು ಯಾವ ಪಂಥದೆಡೆ ನಡೆಯಬೇಕು ಎಂಬ ನಿಶ್ಚಿತ ಗುರಿ ಇವರ ಸಾಹಿತ್ಯದಲ್ಲಿ ಕಾಣಬಹುದು. ಹಿಂದಿ ಸಾಹಿತ್ಯ ದರ್ಶನ, ಪ್ರೇಮಚಂದರ ಜೀವನ, ಕಥಾಸಾಹಿತ್ಯ, ಪತ್ರಸಾಹಿತ್ಯ, ಪ್ರಬಂಧ ಸಾಹಿತ್ಯ, ಬಾಲಸಾಹಿತ್ಯ, ಪ್ರೇಮಾಶ್ರಮ (ಕಾದಂಬರಿ-ಮೇವುಂಡಿ ಮಲ್ಲಾರಿ) ಅನುಕ್ರಮವಾಗಿ ಗುರುರಾಜ ಜೋಶಿ, ಎಸ್.ವಿ.ಭಟ್ಟ, ಮೇವುಂಡಿ ಮಲ್ಲಾರಿ, ವೆಂ.ಮು. ಜೋಶಿ, ಗುರುನಾಥ ಜೋಶಿ, ಬಾಳಾಚಾರ್ಯ ಅವಧಾನಿ ಅವರ ಲೇಖನಗಳನ್ನು ಬುರ್ಲಿ ಬಿಂದು ಮಾಧವ ಆಚಾರ್ಯರು ಸಂಪಾದಿಸಿದ್ದಾರೆ.
©2024 Book Brahma Private Limited.