ನಂಬಿಯಣ್ಣ ತಮಿಳಿನ ಪೆರಿಯಪುರಾಣದಲ್ಲಿ ನಿರೂಪಿತರಾಗಿರುವ ಅರುವತ್ತುಮೂರು ಶಿವಭಕ್ತರಲ್ಲಿ ಒಬ್ಬರಾಗಿದ್ದು ಶಿವದೇವಾಲಯಗಳನ್ನು ಸಂದರ್ಶಿಸಿ ಗೀತೆಗಳನ್ನು ಹಾಡುವುದೇ ಈತನ ಕಾಯಕವಾಗಿತ್ತು. ಅವನ ಎಲ್ಲ ಮೂಲ ಮತ್ತು ಪಾಠಾಂತರಗಳನ್ನು ತೀ.ನಂ.ಶ್ರೀ ಅವರು ಸಂಪಾದಿಸಿದ್ದು ಸವಿವರ ಅರ್ಥ ಸಹಿತ ನಂಬಿಯಣ್ಣ ರಗಳೆಗಳನ್ನು ನೀಡಿದ್ದಾರೆ.
ತೀ.ನಂ.ಶ್ರೀ ಎಂತಲೇ ಪರಿಚಿತರಾಗಿರುವ ತೀರ್ಥಪುರ ನಂಜುಂಡಯ್ಯನವರ ಮಗ ಶ್ರೀಕಂಠಯ್ಯ ಅವರ ಹುಟ್ಟೂರು ಚಿಕ್ಕನಾಯಕನಹಳ್ಳಿ ಹತ್ತಿರದ ತೀರ್ಥಪುರ. ಮೈಸೂರಿನಲ್ಲಿ ಪದವಿ ಪಡೆದಿದ್ದ ಇವರು ಸಿವಿಲ್ ಸರ್ವೀಸ್ ಪರೀಕ್ಷೆ ಪಾಸು ಮಾಡಿ ಕೇವಲ ಒಂದುವರೆ ತಿಂಗಳು ಮಾತ್ರ ಅಮಾಲ್ದಾರರಾಗಿ ಸೇವೆ ಸಲ್ಲಿಸಿದ್ದ ಅವರು ಕಾಲೇಜಿನ ಅಧ್ಯಾಪಕರಾದರು. ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಬರೆದ ಕೃತಿಗಳೆಂದರೆ ಒಲುಮೆ, ಹೆಣ್ಣು ಮಕ್ಕಳ ಪದಗಳು, ಬಿಡಿಮುತ್ತು, ಪಂಪ, ನಂಬಿಯಣ್ಣನರಗಳೆ, ರನ್ನನ ಗದಾಯುದ್ಧ ಸಂಗ್ರಹ, ಭಾರತೀಯ ಕಾವ್ಯ ಮೀಮಾಂಸೆ, ಕನ್ನಡ ಮಾಧ್ಯಮ ವ್ಯಾಕರಣ, ರಾಕ್ಷಸನ ಮುದ್ರಿಕೆ, ನಂಟರು ಇವರ ಪ್ರಮುಖ ಕೃತಿಗಳು. ಇವರು ಬರೆದಿರುವ ಭಾರತೀಯ ...
READ MORE