‘ಸಮವಸ್ತ್ರದೊಳಗೊಂದು ಸುತ್ತು’ ಕೃತಿಯು ಡಿ.ಸಿ ರಾಜಪ್ಪ ಅವರ ಸಂಪುಟ-4 ಕೃತಿಯು ಕವನಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಕಾವ್ಯ ಯಾರೊಬ್ಬರ ಸ್ವತ್ತು ಅಲ್ಲ. ಅದು ಬರೆದವನ ಭಾವ. ಕಾವ್ಯಕ್ಕೆ ದುಷ್ಟ ಸಂಹಾರ ಶಕ್ತಿಯೂ ಇದೆ. ಶಿಷ್ಟರ ಸಂರಕ್ಷಣಾ ಶಕ್ತಿಗಳು ರೂಢಿಗತವಾಗಿವೆ. ಪೊಲೀಸರ ಕಾವ್ಯ ಪರಂಪರೆ ಇತ್ತೀಚಿನದಲ್ಲ, ಅದು ಪಂಪನಿಂದ ಆರಂಭವಾದದ್ದು, ಪಂಪನೂ ಸಹ ಸೇನಾದಂಡನಾಯಕನಾಗಿ ಸಮವಸ್ತ್ರ ಧರಿಸಿದವನು ನಮ್ಮದು ಪಂಪಪರಂಪರೆ, ಪಂಪ ಅದು ಮಹಾಭಾರತ ಬರೆದರೆ ಇಂದು ಪೊಲೀಸರು ಮನೆ ಮನೆಯ ಭಾರತ ಬರೆಯುತ್ತಿದ್ದಾರೆ. ಕನ್ನಡದಲ್ಲಿ ಕಾದಂಬರಿ ಪ್ರಕಾರ ಹುಟ್ಟಿಕೊಂಡಿದ್ದೇ ಪೊಲೀಸರಿಂದ. 1899 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೋಲಿಸ್ ಇನ್ಸಪೆಕ್ಟರ್ ಆಗಿದ್ದ ಗುಲ್ವಾಡಿ ವೆಂಕಟರಾಯರು ಬರೆದ ಇಂದಿರಾಬಾಯಿ ಸಾಮಾಜಿಕ ಕಾದಂಬರಿಯೇ ಕನ್ನಡದ ಮೊಟ್ಟ ಮೊದಲ ಕಾದಂಬರಿ. ಇದರ ಹರಿಕಾರರೇ ಶ್ರೀ ಗುಲ್ವಾಡಿ ವೆಂಕಟರಾಯರು ಎಂದು ಇಲ್ಲಿ ವಿಶ್ಲೇಷಿತವಾಗಿದೆ.
©2024 Book Brahma Private Limited.