'ಪೆರಿಯಾರ್' ಅಂದರೆ ತಮಿಳಿನಲ್ಲಿ ಗೌರವಾನ್ವಿತ ಅಥವಾ ದೊಡ್ಡವರು ಎಂಬರ್ಥವಿದ್ದು ಈ ಮಾತಿನ ಮೂರ್ತ ರೂಪವೇ ಆಗಿ ಲಕ್ಷಾಂತರ ಜನರಿಂದ ಪೆರಿಯಾರ್ ಎಂದು ಕರೆಸಿಕೊಳ್ಳುತ್ತಿದ್ದವರು ಪೆರಿಯಾರ್ ಅಥವಾ ಈರೋಡು ವೆಂಕಟ ರಾಮಸ್ವಾಮಿ ನಾಯ್ಕರ್. ಸಮಾಜದ ಕಟ್ಟು ನಿಟ್ಟಿನಲ್ಲಿ ತಮ್ಮದೇ ನಿಲುವನ್ನು, ಸಿದ್ದಾಂತವನ್ನು ಹೊಂದಿದ್ದ ಅವರು ಬರಹ-ಭಾಷಣಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ. ಇದನ್ನು ಲೇಖಕ ಬಿ. ಆರ್. ರಂಗಸ್ವಾಮಿ ಅವರು ಸಂಪಾದಿಸಿದ್ದಾರೆ.
ಲೇಖಕ ಬಿ. ಆರ್. ರಂಗಸ್ವಾಮಿ ಅವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಹೋಬಳಿಯ ಪಾಳ್ಯಾದ ಹಳ್ಳಿ ಗ್ರಾಮದವರು. ನವಸಮಾಜ ನಿರ್ಮಾಣ ವೇದಿಕೆಯ ಸಂಸ್ಥಾಪಕರು. ಬಾರುಕೋಲು ಪತ್ರಿಕೆಯ ಸಂಪಾದಕರು. ಪೆರಿಯಾರ್ ಈ. ವೆಂ. ರಾಮಸ್ವಾಮಿ ಬರಹ ಮತ್ತು ಭಾಷಣಗಳ ಸಂಗ್ರಹ’ವನ್ನು ಮೂರು ಸಂಪುಟಗಳಲ್ಲಿ ಹೊರತಂದಿದ್ದಾರೆ. ...
READ MORE