ಹಿರಿಯ ಲೇಖಕ ದೇಸಾಯಿ ದತ್ತಮೂರ್ತಿ ಅವರು ಖಲೀಲ್ ಗಿಬ್ರಾನ್ ನ ಉಕ್ತಿಗಳ ಸಂಗ್ರಹ ಕೃತಿ-ಪ್ರವಾದಿಯ ತೋಟ. ಖಲೀಲ್ ಗಿಬ್ರಾನನು ತನ್ನ ಅದ್ಭುತ ಕಲ್ಪನಾ ಸಾಮರ್ಥ್ಯದ ಶಬ್ದಗಳೊಂದಿಗಿರುವ ಸಾಹಿತ್ಯ ಸೃಷ್ಟಿಗೆ ಪ್ರಸಿದ್ಧ. ಮೂಲ ಲೆಬನಾನ್ ದೇಶದ ವಾಸಿಯಾದರೂ, ಅಮೆರಿಕದಲ್ಲಿ ನೆಲೆಸಿದ ನಂತರ ಆತನ ಬಹುತೇಕ ಸಾಹಿತ್ಯವಿರುವುದು ಇಂಗ್ಲಿಷಿನಲ್ಲಿ. ಈತನ ಸಾಹಿತ್ಯಕ ಕೃತಿಗಳಲ್ಲಿ ಬರುವ ಅಮೂಲ್ಯ ಉಕ್ತಿಗಳನ್ನು ಹಾಗೂ ತನ್ನ ಶಿಷ್ಯರಿಗೆ ನೀಡಿದ ಸಲಹೆ-ಉಪದೇಶ-ಸೂಚನೆಗಳನ್ನು ಸಂಗ್ರಹಿಸಿ ಒಂದೆಡೆ ನೀಡಿರುವ ಕೃತಿ. ಈತನ ಉಕ್ತಿಗಳು ಬದುಕಿನ ಕಲೆ ಹಾಗೂ ಪ್ರೀತಿಯನ್ನು ತಿಳಿಸಿಕೊಡುತ್ತವೆ. ಪ್ರೇಮ-ಕಾಮ-ದ್ವೇಷ ಹೀಗೆ ಮನೋಕಾಮನೆಗಳ ಸ್ವರೂಪ ಹಾಗೂ ಸ್ವಭಾವಗಳನ್ನೂ, ಸಾಮಾಜಿಕವಾಗಿರುವ ಮೂಢನಂಬಿಕೆ, ತಪ್ಪುಗ್ರಹಿಕೆಗಳನ್ನು ಅತ್ಯಂತ ಸೂಕ್ಷ್ಮವಾಗಿ, ಮಾನವೀಯ ನೆಲೆಯಲ್ಲಿ ಹೇಳುವುದು ಓದುಗರಿಗೆ ಆಪ್ತವೆನಿಸುತ್ತವೆ.
ದೇವದತ್ತ ಕಾವ್ಯ ನಾಮದಲ್ಲಿ ಕೃತಿಗಳನ್ನು ರಚಿಸುತ್ತಿದ್ದ ದೇಸಾಯಿ ದತ್ತಮೂರ್ತಿ (ಜೀವಿತಾವಧಿ: 1927-1979) ಅವರು ಬೇಂದ್ರೆಯವರ ಸಮಕಾಲೀನರು. ಖಲೀಲ್ ಗಿಬ್ರಾನ್ರ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಅನುವಾದಿತ ಕೃತಿ ‘ಮಾನವಪುತ್ರ ಜೀಸಸ್’ ಪ್ರಸಿದ್ಧ ಕೃತಿಯಾಗಿತ್ತು. ಹಾಗೇ ಖಲೀಲ್ ಗಿಬ್ರಾನ್ ಉಕ್ತಿ ಸಂಗ್ರಹವಾದ ’ಪ್ರವಾದಿಯ ತೋ’ಟ ’ವನ್ನು ರಚಿಸಿದ್ದಾರೆ. ಹೂಬಳ್ಳಿ ಎಂಬುದು ಅವರ ಮತ್ತೊಂದು ಕೃತಿ. ...
READ MORE