ಲೇಖಕಿ ಪ್ರೊ. ಸುಮಾ ಸಾವಂತ ಅವರು ಸಂಪಾದಿಸಿದ ಕೃತಿ-"ಶೋಧ ಸಂಚಯ". ಪ್ರಜಾಪ್ರಭುತ್ವದ ಮೂಲ ತತ್ವಗಳೆಲ್ಲವೂ ಸಾರ್ವತ್ರಿಕವಾಗಿ ಒಪ್ಪಿದ ಉತ್ತಮ ವ್ಯವಸ್ಥೆ. ಮಾನವ ಸಮಾಜವೆಂಬ ಜೀವಂತ ಪ್ರಯೋಗಶಾಲೆಯಲ್ಲಿ ಪರೀಕ್ಷೆಗೋಳಪಟ್ಟ ಚಿಂತನ ಮಂಥನದ ಮೂಲಕ ಪರಿಷ್ಕೃತಗೊಂಡು ನೈತಿಕ ಮೌಲ್ಯಗಳ ಮೂಲಕ ಅಭಿವ್ಯಕ್ತಿ ಪಡೆದ ಜ್ಞಾನದ ಸಿಂಚನದ ಶೋಧಗಳು ಈ ಹೊತ್ತಿಗೆಯಲ್ಲಿ ಅಡಗಿವೆ. ಇಲ್ಲಿಯ 25 ಲೇಖನಗಳು ವಿವಿಧ ಸಂಬಂಧಗಳ ಒತ್ತಡದಿಂದ ರೂಪಗೊಂಡವು. ಯೌವನ ಎಲ್ಲ ಜೀವಿಗಳ ಬದುಕಿನ ಸುಂದರ ಕಾಲಘಟ್ಟ. ಅಪಾರ ಜೀವನೋತ್ಸಾಹ, ಹುಮ್ಮಸ್ಸು, ಪ್ರಚಂಡ ಧೈರ್ಯ, ಯೌವನವು ಬರುವಾಗ ಎಷ್ಟು ಹಿತಕರವೊ, ಸಂದ ಇವನ ದಿನಗಳನ್ನು ಮೆಲುಕು ಹಾಕಲು ಅಷ್ಟೇ ಹಿತಕರ.ಈ ಎಲ್ಲಾ ಕ್ರಾಂತಿಕಾರಿ ಚಿಂತನೆಗಳು ಹಾಗೂ ಕಾರ್ಯಗಳು ಮೊಳಕೆಯೊಡೆದು, ಕುಡಿ ಬಿಟ್ಟು ಹಬ್ಬುವ ಕಾಲವಿದು. ಇದಕ್ಕೆ ಸ್ತ್ರೀ-ಪುರುಷ ಚಿಂತನೆಗಳು ಅವಧಿಯ ನಿರ್ಣಯಗಳೇ ಆಗಿವೆ. ಅದರ ಪರಿಣಾಮ ಸಾಧ್ಯಾನು ಸಾಧ್ಯತೆ ಮುಂತಾದವುಗಳ ಭಾವನೆಗಳ ಕೃತಿ ಇದು.
ವೈದೇಹಿ ಕಥೆಗಳಲ್ಲಿ ಕರಾವಳಿ ಕುಂದಾಪುರ ಜಗತ್ತು, ಡಾ. ಅನುಪಮಾ ನಿರಂಜನರವರ ಮಾಧವಿ, ರಕ್ಕಸತಂಗಡಿ ಹತ್ತಿಕಲಾರದ ತಲೆದಂಡ, ಕುವೆಂಪು ಅವರ ಕಥೆಗಳಲ್ಲಿ ಕೌಟುಂಬಿಕ ನೆಲೆಗಳು, ಶರಣ ಸಾಹಿತ್ಯದಲ್ಲಿ ಸಾಮಾಜಿಕ ಚಳವಳಿ, ನಾಟಕ ಸಾಹಿತ್ಯ,ಸಾಹಿತ್ಯ ಮತ್ತು ಸೃಜನಶೀಲತೆ,ಕನ್ನಡ ಸಿನಿಮಾ ಲೋಕದ ಸುತ್ತ ಒಂದು ಅವಲೋಕನ, ಮೈಲಾರ ಸಂಸ್ಕೃತಿ, ಹೊರಗ ಅದಿಮ ಬುಡಕಟ್ಟು, ಕನ್ನಡ ಪ್ರಾಚೀನ ಸಾಹಿತ್ಯಕ್ಕೆ ಶಾಸನಗಳ ಕೈಗನ್ನಡಿ,ಮಹಿಳಾ ಆತ್ಮಕಥನ ಗಳಲ್ಲಿ ಸ್ತ್ರೀ ಸಂಘರ್ಷ, ಹೀಗೆ ಹತ್ತು ಹಲವಾರು ಲೇಖನಗಳು ಮನಸ್ಸನ್ನು ಆಕರ್ಷಿಸುತ್ತವೆ.
©2024 Book Brahma Private Limited.