‘ಸಮಗ್ರ ದಾಸ ಸಾಹಿತ್ಯ ಸಂಪುಟ-12’ ಶ್ರೀಗೋಪಾಲದಾಸರ ಕೀರ್ತನೆಗಳನ್ನೊಳಗೊಂಡ ಈ ಕೃತಿಯನ್ನು ಲೇಖಕಿ ಡಾ. ಅಕ್ಕಮಹಾದೇವಿ ಅವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಮುನ್ನುಡಿ, ಎರಡು ಮಾತು, ಯೋಜನೆಯನ್ನು ಕುರಿತು, ಪ್ರಕಾಶಕರ ಮಾತು, ಸಂಪಾದಕ ಮಂಡಳಿಯ ನುಡಿ, ಪ್ರಸ್ತಾವನೆ, ಕೀರ್ತನೆಗಳ ಕ್ರಮಸೂಚಿ, ಶ್ರೀಗೋಪಾಲದಾಸರ ಕೀರ್ತನೆಗಳು ಸೇರಿದಂತೆ ಅನುಬಂಧಗಳಲ್ಲಿ ಕಠಿಣ ಶಬ್ದಗಳ ಅರ್ಥ, ಪೂರ್ವಕಥೆಗಳು ಮತ್ತು ಟಿಪ್ಪಣಿಗಳು, ಅಸಮಗ್ರ ಕೀರ್ತನೆ, ಸಂಕೇತಾಕ್ಷರಗಳ ವಿವರ, ಕೀರ್ತನೆಗಳ ಆಕಾರಾದಿ, ಸಹಾಯಕ ಗ್ರಂಥಗಳು ಸಂಕಲನಗೊಂಡಿವೆ.
ಲೇಖಕಿ ಅಕ್ಕಮಹಾದೇವಿ ಅವರು 1956 ನವೆಂಬರ್ 22 ಮೈಸೂರಿನಲ್ಲಿ ಜನಿಸಿದರು. ಭಾಷಾಂತರ ಡಿಪ್ಲೊಮಾ ಮಾಡಿದ್ದು ’ನೀರ್ ನಿಂತ ಕೈ ನಿಧಾನ’ ಪ್ರಮುಖ ನಾಟಕ 2007 ರಲ್ಲಿ ಪ್ರಕಟಗೊಂಡಿತು. ’ದಾಸವರೇಣ್ಯ, ಅನ್ನಮಾಚಾರ್ಯರು, ಎಚ್.ಕೆ. ವೀರಣ್ಣಗೌಡ, ನಂಜನಗೂಡು ತಿರುಮಲಾಂಬಾ’ ಅವರ ಜೀವನ ಕೃತಿಗಳನ್ನು ಸಂಪಾದಿಸಿದ್ದು ’ಪುರಂದರದಾಸರ ಮತ್ತು ಅನ್ನಮಾಚಾರ್ಯರ ಕೀರ್ತನೆಗಳ ಸಾಂಸ್ಕೃತಿಕ ಅಧ್ಯಯನ’ ಎಂಬ ಕೃತಿಯನ್ನು ಸಂಶೋಧಿಸಿದ್ದಾರೆ. ಪುಲಿಗೆರೆ ಸೋಮಕವಿಯ ಸೋಮೇಶ್ವರ ಶತಕಂ (2017) ಅವರ ಮತ್ತೊಂದು ಕೃತಿ ’ಬುಡಕಟ್ಟು ನ್ಯಾಯ’ ಅನುವಾದ ಕೃತಿ. ’ಗುರುಗೋವಿಂದ ವಿಠಲ ಪ್ರಶಸ್ತಿ’ ಸಂದಿದೆ. ಅವರು ಬರಹಗಾರರ ಸಂಘd ಮೈಸೂರು ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ಧಾರೆ. ...
READ MORE