‘ರಸ್ತಾಪುರದ ಭೀಮಕವಿ ವಿರಚಿತ ಡೋರನಹಳ್ಳಿ ಶ್ರೀ ಮಹಾಂತೇಶ್ವರ ಪುರಾಣ’ ಕೃತಿಯನ್ನು ಡಾ. ನಾಗಾಬಾಯಿ ಬುಳ್ಳಾ ಅವರ ಪ್ರಧಾನ ಸಂಪಾದಕತ್ವದಲ್ಲಿ ಡಾ. ಶಾಂತಪ್ಪ ಡಂಬಳ ಹಾಗೂ ಪ್ರೊ. ಮಲ್ಲಪ್ಪ ಮಾನೆಗರ ಅವರ ಸಂಪಾದಕತ್ವದಲ್ಲಿ ಪ್ರಕಟವಾಗಿದೆ. ಜಾನಪದ ಸಾಹಿತ್ಯದಲ್ಲಿ ರಸ್ತಾಪುರ ಭೀಮಕವಿಯ ಹೆಸರು ಅಜರಾಮರ. ಇವರ ‘ಹಾಲುಮತೋತ್ತೇಜಕ ಪುರಾಣ’ವು ಜಾನಪದ ಸಾಹಿತ್ಯದಲ್ಲಿ ಗಮನಾರ್ಹ ಕೃತಿ. ನೈಜ ಅರ್ಥದಲ್ಲಿ ಇವರ ಅನುಭಾವ ಕವಿಗಳು. . ‘ಸಗರ ಸಾವಿರ ಹಳ್ಳಿ ಏಕ ದೋರನಹಳ್ಳಿ’ ಎಂಬ ಮಾತು ಶಹಾಪುರ ತಾಲೂಕಿನ ಈ ದೊರನಹಳ್ಳಿ ಗ್ರಾಮದ ಕುರಿತೇ ಹೇಳಿದ್ದು, ಇದರ ಐತಿಹಾಸಿಕ ಮಹತ್ವದ ದ್ಯೋಕವಾಗಿದೆ. ಇಂತಹ ದೋರನಹಳ್ಳಿಯ ಶ್ರೀ ಮಹಾಂತೇಶ್ವರ ಪುರಾಣವನ್ನು ರಸ್ತಾಪುರದ ಭೀಮಕವಿಗಳು ರಚಿಸಿದ್ದನ್ನು ಸಂಪಾದಿಸಿದ್ದೇ ಈ ಕೃತಿ.
ಡಾ. ಶಾಂತಪ್ಪ ಎನ್. ಡಂಬಳ ಅವರು ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ (ಜನನ: 22-07-1972) ತಾಲೂಕಿನ ಮಳ್ಳಿ ಗ್ರಾಮದವರು. ಕರ್ನಾಟಕ ವಿ.ವಿ.ಯಿಂದ ಬಿ.ಎ, ಗುಲಬರ್ಗಾ ವಿ.ವಿ.ಯಿಂದ ಸ್ನಾತಕೋತ್ತರ ಎಂ.ಎ, ಬಿ.ಈಡಿ, ಗುಲಬರ್ಗಾ ಜಿಲ್ಲೆಯ ವೃತ್ತಿ ನಾಟಕಕಾರರು: ಒಂದು ಅಧ್ಯಯ” ವಿಷಯವಾಗಿ ಎಂ.ಫಿಲ್, ರಸ್ತಾಪುರದ ಭೀಮಕವಿ ಹಾಗೂ ಅವರ ಕೃತಿಗಳು: ಒಂದು ಅಧ್ಯಯನ’ ವಿಷಯವಾಗಿ ಪಿ.ಎಚ್.ಡಿ ಪಡೆದಿದ್ದಾರೆ. ಕೃತಿಗಳು: ರಸ್ತಾಪೂರ ಭೀಮಕವಿ ವಿರಚಿತ ದೋರನಹಳ್ಳಿ ಶ್ರೀ ಮಹಾಂತೇಶ್ವರ ಪುರಾಣ (ಸಂಪಾದನೆ), ರಸ್ತಾಪುರ ಭೀಮಕವಿಯ ಹಾಲುಮತೋತ್ತೇಜಕ ಪುರಾಣ, ಮದುವೆ: ಒಂದು ಜನಪದೀಯ ಅಧ್ಯಯನ, ಗುಲಬರ್ಗಾ ಜಿಲ್ಲೆಯ ವೃತ್ತಿ ನಾಟಕಕಾರರು, ರಸ್ತಾಪುರದ ಭೀಮಕವಿ (ಸಂಶೋಧನಾ ...
READ MORE