ಬಸವಾದಿ ಶರಣರ ಮತ್ತು ವಚನ ಸಾಹಿತ್ಯ ಕುರಿತ ಪ್ರಾತಿನಿಧಿಕ ಕವನಗಳ ಸಂಕಲನ-ನೀನೊಲಿದಡೆ. 2020 ನೇ ಸಾಲಿನಲ್ಲಿ ಬಸವ ಜಯಂತಿ ಪ್ರಯುಕ್ತ ಬಸವಣ್ಣನವರ ಮತ್ತು ಬಸವಾದಿ ಶರಣರ ಕುರಿತು ಹಮ್ಮಿಕೊಂಡಿದ್ದ ವೀಡಿಯೋ ಕವಿಗೋಷ್ಠಿಯಲ್ಲಿ ಓದಿದ 32 ಕವಿಗಳ ಸೃಜನಶೀಲ ಬರವಣಿಗೆ, ಕಾವ್ಯ ಸಂಗ್ರಹವಿದು. ಸಾಹಿತಿ ಮಂಡಲಗಿರಿ ಪ್ರಸನ್ನ ಅವರು ಸಂಪಾದಿಸಿದ್ದಾರೆ.
ಸಾಹಿತಿ ಮಹಾಂತೇಶ ಮಸ್ಕಿ ಅವರು ಕೃತಿಗೆ ಬೆನ್ನುಡಿ ಬರೆದು ‘ಕಳೆದ ವರ್ಷದ ಬಸವ ಜಯಂತಿ ಸಂದರ್ಭದಲ್ಲಿ (2020) ಕೊರೊನಾದಂತಹ ಮಹಾಮಾರಿಯ ಆತಂಕಕಾರಿ ಸಮಯವೂ ಹೌದು. ರಾಯಚೂರು ಜಿಲ್ಲಾ ಕವಿವೃಕ್ಷ ಬಳಗವು ತನ್ನ ಸದಸ್ಯರಿಂದ ರಚಿಸಲ್ಪಟ್ಟ ಈ ಕವನ ಸಂಕಲನದ ಕವಿತೆಗಳು ಬಸವಾದಿ ಶರಣರನ್ನು ಮುಖ್ಯವಾಗಿ ಬಸವಣ್ಣನವರನ್ನು ಕೇಂದ್ರಿತವಾಗಿವೆ. ಇದನ್ನು ಕೂಡಿಸಿ ಪ್ರಕಟಗೊಳಿಸುವ ಸದಿಚ್ಛೆ ಹೊಂದಿದ ಕವಿ ಮಂಡಲಗಿರಿ ಪ್ರಸನ್ನ ಅವರು, ಪ್ರಗತಿಪರ ಚಿಂತಕರಿದ್ದು, ಕೆಲವು ಜನ ಹೊಸ ಕವಿಗಳ ಮೂಲಕ ಪರಿಚಯಿಸುವ ಹಂಬಲವನ್ನು ಇಟ್ಟುಕೊಂಡವರು. ವರ್ಗ -ವರ್ಣಗಳ ಶೋಷಣೆಯಾಗುತ್ತಿರುವ ಇಂದಿನ ಸನ್ನಿವೇಶಗಳು ಇನ್ನೂ ಹಸಿಯಾಗಿಯೇ ಇರುವುದರಿಂದ ಮತ್ತು ಅದು ಆರದ ಗುಣ ಹೊಂದಿರದರಿಂದ ಇಂತಹ ಪ್ರಯತ್ನಗಳೇ ಅದಕ್ಕೆ ಔಷಧಿಗಳಾಗಬಲ್ಲವು. ಮಂಡಲಗಿರಿ ಪ್ರಸನ್ನ ಅವರ ಈ ಪ್ರಯತ್ನಗಳು ಹೊಸ ಪ್ರಸನ್ನತೆಯನ್ನು ಮೂಡಿಸಿವೆ. ನಾವೆಲ್ಲ ಮತ್ತೇ ಮತ್ತೆ ಬಸವಣ್ಣನ ಹೊಸಗೆಗೈಯ್ಯುತ್ತಲೇ ನೋಡಬೇಕಿದೆ. ಈ ನಿಟ್ಟಿನಲ್ಲಿ ಈ ಸಂಪಾದಿತ ಕೃತಿಯು ಒಂದು ಹೊಸ ಹೆಜ್ಜೆ’ ಎಂದು ಪ್ರಶಂಸಿಸಿದ್ದಾರೆ.
ರಂಗಭೂಮಿ, ಮಕ್ಕಳ ಸಾಹಿತ್ಯದಲ್ಲಿ ವಿಶೇಷ ಒಲವು ಇರುವ ಮಂಡಲಗಿರಿ ಪ್ರಸನ್ನ 1963 ರ ಅಕ್ಟೋಬರ್ 18 ರಂದು ಕೊಪ್ಪಳ ಜಿಲ್ಲೆ ಕನಕಗಿರಿಯಲ್ಲಿ ಜನಿಸಿದರು. ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಮಾರ್ಕೆಟಿಂಗ್ ವಿಭಾಗದ ಹಿರಿಯ ಅಧಿಕಾರಿಯಾಗಿ 30 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದಿದ್ದಾರೆ. ‘ಕನಸು ಅರಳುವ ಆಸೆ (2000), ಅಮ್ಮ ರೆಕ್ಕೆ ಹಚ್ಚು (2003), ನಿನ್ನಂತಾಗಬೇಕು ಬುದ್ಧ (2016) - ಕವನ ಸಂಕಲನ. ‘ಏಳು ಮಕ್ಕಳ ನಾಟಕಗಳು’ (2016) - ಮಕ್ಕಳ ನಾಟಕಗಳು. ಪದರಗಲ್ಲು, ಕವಿರಾಜ - ಸ್ಮರಣೆ ಸಂಚಿಕೆ ಸಂಪಾದಿತ ಕೃತಿಗಳು. ಕನ್ನಡದ ವಿವಿಧ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ನಿರ್ವಹಿಸಿದ್ಧಾರೆ. ಅವರ ...
READ MORE