ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸರ್ವಜ್ಞ ಕವಿಗೆ ಒಂದು ವಿಶಿಷ್ಟವಾದ ಸ್ಥಾನವಿದೆ. ಪೌರಾಣಿಕವಾದ, ಮತಿಯವಾದ, ಒಂದು ನಿರ್ದಿಷ್ಟವಾದ ವಸ್ತುವನ್ನು ಆಧರಿಸಿಕೊಂಡು ದೀರ್ಘವಾದ ಕಾವ್ಯವನ್ನು ಬರೆದು ಪ್ರಸಿದ್ಧಿ ಪಡೆಯಬೇಕೆಂದು ಸರ್ವಜ್ಞನು ಕಾವ್ಯ ರಚನೆ ಮಾಡಲಿಲ್ಲ ಜನಪರ ನಿಲುವಿನಿಂದ ಸಾಮಾನ್ಯ ಜನರ ಬದುಕಿನ ಸಂಗತಿಗಳನ್ನೇ ಆಶುಕವಿತೆಗಳಾಗಿಸಿ, ಲೋಕ ಶಿಕ್ಷಣದ ಕಾರ್ಯವನ್ನು ಕೈಗೊಂಡರು.ಅದಕ್ಕಾಗಿ ಕಾವ್ಯಭಾಷೆ ಸಂಬಂಧಗಳ ಘನತೆಯನ್ನು ಕುರಿತಂತೆ ತಲೆಕೆಡಿಸಿಕೊಳ್ಳದೆ, ಜಾನಪದರಿಗೆ ಆಪ್ತವಾಗಿದ್ದ ತ್ರಿಪದಿಯನ್ನೇ ತನ್ನ ಕಾವ್ಯ ಮಾಧ್ಯಮವನ್ನಾಗಿ ಮಾಡಿಕೊಡರು. ಹೀಗೆ ನಿಜವಾದ ಅರ್ಥದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮೊದಲ ಬಾರಿಗೆ ಶ್ರೀಸಾಮಾನ್ಯರ ಸಾಹಿತ್ಯವನ್ನು ರಚಿಸಿ, ಸದ್ದಿಲ್ಲದ ಕ್ರಾಂತಿಯನ್ನು ಉಂಟು ಮಾಡಿ, ಜನತೆಯ ಆಪ್ತ ಕವಿಯಾದವನು ಸರ್ವಜ್ಞ. ಈ ಕೃತಿಯಲ್ಲಿ ಸರ್ವಜ್ಞನ ಜೀವನ ವೃತ್ತಾಂತ, ಸರ್ವಜ್ಞನ ವಚನಗಳಲ್ಲಿ ನೀತಿಬೋಧನೆ, ಸರ್ವಜ್ಞನ ವಚನಗಳಲ್ಲಿ ರಾಜಕೀಯ ನೀತಿ, ಸರ್ವಜ್ಞನ ವಚನಗಳಲ್ಲಿ ಮಹಿಳೆ, ಸರ್ವಜ್ಞ ವಚನಗಳಲ್ಲಿ ಗುರುವಿನ ಮಹತ್ವ,ಸರ್ವಜ್ಞನ ವ್ಯಕ್ತಿತ್ವ, ಹಾಗೂ ಸರ್ವಜ್ಞನ ವಚನಗಳ ವಿಶ್ಲೇಷಣೆ ಹೀಗೆ ವಿಂಗಡಿಸಿಕೊಂಡು ಸರ್ವಜ್ಞನ ಕಿರುಪರಿಚಯವನ್ನು ಡಾ. ಶರಣಬಸಪ್ಪ ವಡ್ಡನಕೇರಿ ಮಾಡಿಕೊಟ್ಟಿದ್ದಾರೆ.
©2024 Book Brahma Private Limited.