ಹಿರಿಯ ಲೇಖಕಿ ಡಾ. ಶಕುಂತಲಾ ಸಿದ್ಧರಾಮ ದುರಗಿ ಅವರ ಜನಪದ ಸಾಹಿತ್ಯಕ್ಕೆ ಸಂಬಂಧಿಸಿದ ಸಂಪಾದಿತ ಕೃತಿ.-ಕಥನ ಗೀತ ಮಾಲೆ. ಕಥನಗೀತೆ ಜನಪದ ಸಾಹಿತ್ಯದ ಪರಿಣಾಮಕಾರಿ ಪ್ರಕಾರ. ಇದರಲ್ಲಿ ಕಥಾಭಿರುಚಿ, ಗೇಯತೆಯ ಗುಣಗಳಿಂದಾಗಿ ವಿಶೇಷ ಆಕರ್ಷಣೆ ಪಡೆದುಕೊಂಡಿದೆ. ಇಂತಹ 55 ಕಥನಗೀತೆಗಳನ್ನು ಲೇಖಕಿಯು ಸಮರ್ಥ ವ್ಯಾಪಕ ಕ್ಷೇತ್ರಕಾರ್ಯ ಮಾಡಿ, ಸಂಗ್ರಹಿಸಿದ್ದಾರೆ. ಆಯ್ದುಕೊಂಡ ವಿಷಯದ ಕುರಿತು ಸುದೀರ್ಘವಾದ ಪ್ರಸ್ತಾವನೆ ಬರೆದಿದ್ದಾರೆ. ಅರ್ಥಪೂರ್ಣವಾದ ಪ್ರಾದೇಶಿಕ ಪದಕೋಶವಿದೆ. ಇಲ್ಲಿಯ ಸಂಗ್ರಹಕ್ಕನುಗುಣವಾಗಿ ವಿಭಾಗ ಕ್ರಮ ಅನುಸರಿಸಿದ್ದಾರೆ. ಹೀಗೆ ಹತ್ತು ಹಲವು ಶಾಸ್ತ್ರೀಯ ಸಂಪಾದನಾ ವಿಧಾನಗಳನ್ನು ಅನುಸರಿಸಿದ್ದಾರೆ. ಇದು ಕೇವಲ ಜನಪದ ಆಸಕ್ತರಿಗಷ್ಟೇ ಅಲ್ಲ, ಅಧ್ಯಯನ ಮಾಡಬೇಕೆನ್ನುವ ಯುವ ಪೀಳಿಗೆಗೆ ಕೂಡ ಪ್ರಯೋಜನವಾಗುತ್ತದೆ. ಮೌಖಿಕ ಪರಂಪರೆ ಅಳಿವಿನಂಚಿನಲ್ಲಿರುವಾಗ ಪುಸ್ತಕದಲ್ಲಿ ದಾಖಲಿಸಿ ಶಾಶ್ವತಗೊಳಿಸಿದ ಶ್ರೇಯಸ್ಸು ಲೇಖಕಿಗೆ ಸಲ್ಲುತ್ತದೆ.
©2024 Book Brahma Private Limited.