ನವೀನ್ ಸೂರಿಂಜೆ ಅವರು ಸಂಪಾದಿಸಿರುವ ಕೃತಿ ಸದನದಲ್ಲಿ ಶ್ರೀರಾಮರೆಡ್ಡಿ. ಎಡಪಂಥೀಯರೆಂದರೆ ಯಾರು ? ಕೋಮುವಾದಿಗಳನ್ನು ಮಾತ್ರವಲ್ಲದೆ ಕಾಂಗ್ರೆಸ್ ಅನ್ನೂ ಎಡಪಂಥೀಯರು ಯಾಕೆ ವಿರೋಧಿಸ್ತಾರೆ ? ದಲಿತರು, ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಅಲ್ಪಸಂಖ್ಯಾತರು, ಕಾರ್ಮಿಕರ ಬಗೆಗೆ ಕಮ್ಯೂನಿಷ್ಟ್ ಪಕ್ಷಗಳ ಅಧಿಕೃತ ನಿಲುವೇನು ? ಸದನದಲ್ಲಿ ಸರಳವಾಗಿ ಶ್ರೀರಾಮ ರೆಡ್ಡಿಯವರು ವಿವರಿಸಿದ್ದಾರೆ. ಈ ಕುರಿತ ಸಮಗ್ರ ಮಾಹಿತಿಯನ್ನು ಈ ಕೃತಿ ಹೊತ್ತಿದೆ.
ಪತ್ರಕರ್ತ, ಲೇಖಕ ನವೀನ್ ಸೂರಿಂಜೆ ಮೂಲತಃ ದಕ್ಷಿಣ ಕನ್ನಡದವರು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಉಷಾ ಕಿರಣ, ಕರಾವಳಿ ಅಲೆ, ಕಸ್ತೂರಿ ನ್ಯೂಸ್ 24@7 ನಲ್ಲಿ ಕೆಲಸ ಮಾಡುತ್ತ. ನಂತರ ಬೆಂಗಳೂರಿಗೆ ಬಂದ ನವೀನ್ ಸೂರಿಂಜೆ ಸಧ್ಯ ಬಿಟಿವಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಷಾಕಿರಣ ಮತ್ತು ಕರಾವಳಿ ಅಲೆ ಪತ್ರಿಕೆಯ ಸುರತ್ಕಲ್ ವಿಭಾಗದ ಬಿಡಿ ವರದಿಗಾರರಾಗಿ ಕೆಲಸ ಮಾಡಿರುವ ನವೀನ್ ಪರಿಸರ ಪರವಾದ ಸುದ್ದಿಗಳು, ಮಾನವತೆಯ ವಿರುದ್ಧದ ನಿಲುವುಗಳಿರೋ ಸಂಘಟನೆಗಳ ವಿರುದ್ಧದ ಸುದ್ದಿಗಳ ಮೂಲಕ ಸುದ್ದಿಯಾದರು. ಕೋಮುಸೂಕ್ಷ್ಮ ಪ್ರದೇಶವಾಗಿರುವ ಸುರತ್ಕಲ್‍ನಲ್ಲಿ ನಡೆದ ಕೋಮುಗಲಭೆಗಳ ಸಚಿತ್ರ ವರದಿ ಮಾಡಿದರು. ...
READ MORE