ಕವಿ ಹಾಗೂ ಅನುವಾದ ರಾಜೇಂದ್ರ ಪ್ರಸಾದ್ ಅವರು ಫ್ರೆಂಚ್ ಕವಿ ಚಾರ್ಲ್ಸ್ ಬೋದಿಲೇರ್ ಅವರ ಕವಿತೆಗಳನ್ನು ಸಂಪಾದಿಸಿದ ಕೃತಿ. ಬೋದಿಲೇರ್ ನನ್ನು ಒಬ್ಬ ಕವಿಯಾಗಿ ನೋಡಿರುವ ನಮಗೆಲ್ಲ. ಅವನೊಳಗಿನ ಅಪ್ರತಿಮ ಸೌಂದರ್ಯ, ಸಂಗೀತ, ಸಂಪನ್ನತೆ,ಕಲಾವಿಮರ್ಶಕತೆ ಕಂಡೇ ಇಲ್ಲ. ಒಂದರ್ಥದಲ್ಲಿ ಅವನೇ ಈ ಜಗತ್ತಿನ ಮೊದಲ ನವ್ಯ ಕವಿ. 19ನೇ ಶತಮಾನದ ಆದಿಯಲ್ಲಿ, ವಿಕ್ದಟರ್ ಹ್ಯೂಗೋ ಅವರ ರಮ್ಯವಾದದ ಕವಿತೆಗಳನ್ನು ಮೊಗೆಮೊಗೆದು ಕುಡಿಯುತ್ತಿದ್ದ ಫ್ರೆಂಚ್ ಜನತೆಗೆ ಒಗರಿನ ವೈನ್ ರುಚಿಯ ನವ್ಯ ಕಾವ್ಯ ಉಣಬಡಿಸಿದ್ದು ಮತ್ತು ಅದುವರೆಗೂ ಇದ್ದ ಕಾವ್ಯದ ವ್ಯಾಪ್ತಿಗಳನ್ನು ಮೀರಿ ಖಾಸಗಿತನಗಳನ್ನು ಎದೆಯ ಒಲವುಗಳನ್ನು ಪಾರದರ್ಶಕವಾಇ ತೆರೆದಿಟ್ಟ ಅಪ್ರತಿಮ ಪ್ರೇಮ ಕವಿ ಬೋದಿಲೇರ್. ಈತ ಬದುಕಿದ್ದು ಕಾವ್ಯದಲ್ಲೇ. ಅವನ ಕಾವ್ಯ ಮತ್ತು ಕಲೆ ರೂಪುಗೊಂಡಿದ್ದುಬದುಕಿನ ಹತಾಶೆ, ನೋವು, ಖಿನ್ನತೆ ಇತ್ಯಾದಿಗಳಲ್ಲಿ. ಆತನ ಕಾವ್ಯಗಳನ್ನು ಸಂಪಾದಿಸಿದ ಲೇಖಕರು ಹೇಳಿದ್ದಾರೆ.
©2024 Book Brahma Private Limited.