ಕವಯತ್ರಿ ಡಾ. ಅನಸೂಯ ಕಾಂಬಳೆ ಅವರು ಬೇರೆ ಬೇರೆ ಕವಯತ್ರಿಯರ ಕವನಗಳನ್ನು ಸಂಪಾದಿಸಿದ ಕವನ ಸಂಕಲನ-ಬೆಂಕಿಯೊಳಗಣ ಬೆಳಕು. ಪ್ರತಿಭಾ ನಂದಕುಮಾರ್, ರೂಪ ಹಾಸನ, ಸವಿತಾ ನಾಗಭೂಷಣ, ಶಶಿಕಲಾ ವಸ್ತ್ರದ್, ವೈದೇಹಿ, ವಿನಯಾ, ತೇಜಶ್ರೀ, ಭಾರತೀದೇವಿ ಪಿ., ಚಂದ್ರಿಕಾ, ಕಾದಂಬಿನಿ, ಚೇತನಾ ತೀರ್ಥಹಳ್ಳಿ, ಭುವನಾ ಹಿರೇಮಠ ಒಳಗೊಂಡಂತೆ 53 ಕವಯತ್ರಿಯರ ಕವಿತೆಗಳನ್ನು ಆಯ್ದು ಸಂಗ್ರಹಿಸಿ, ನೀಡಲಾಗಿದೆ. ಆಧುನಿಕ ಕನ್ಮಡ ಸಾಹಿತ್ಯ ಕಾಲಘಟ್ಟದಲ್ಲಿ ಮಹಿಳೆಯರ ಕವಿತೆಗಳ ಅಧ್ಯಯನಕ್ಕೆ ಈ ಕವನ ಸಂಕಲನ ಪೂರಕವಾಗಲಿದೆ.
ಅನಸೂಯ ಕಾಂಬಳೆ ಅವರು ದಲಿತ ಮಹಿಳಾ ಸಂವೇದನೆಯ ಕನ್ನಡದ ಮುಖ್ಯ ಬರಹಗಾರ್ತಿಯರಲ್ಲಿ ಒಬ್ಬರು. 1970ರ ಡಿಸೆಂಬರ್ 28 ರಂದು ಜನಿಸಿದ ಅನಸೂಯ ಅವರು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಮಲಾಪೂರ ಗ್ರಾಮದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದ ಮೇಲೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.’ಬರಗೂರರ ಕಾದಂಬರಿಗಳು : ಒಂದು ಅಧ್ಯಯ’ ಎಂಬ ಪ್ರಬಂಧ ಸಲ್ಲಿಸಿ ಎಂ.ಫಿಲ್ ಪದವಿ ಮತ್ತು ’ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅಂಬೇಡ್ಕರ್ ಪ್ರಭಾವ' ಎಂಬ ಕಾವ್ಯವನ್ನು ಅನುಲಕ್ಷಿಸಿ ಸಲ್ಲಿಸಿದ ಪ್ರಬಂಧಕ್ಕೆ ಪಿಎಚ್. ಡಿ. ಪದವಿ ಪಡೆದಿದ್ದಾರೆ ಮುಳ್ಳು ಕಂಟಿಯ ನಡುವೆ (ಕವನ ಸಂಕಲನ), ...
READ MORE