ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು

Author : ಯು. ಎನ್. ಸಂಗನಾಳಮಠ

Pages 516

₹ 400.00




Year of Publication: 2017
Published by: ಸಿ ವಿ ಜಿ ಇಂಡಿಯಾ
Address: # 5ನೇ ಅಡ್ಡರಸ್ತೆ, ವಿಧಾನಸೌಧ ಬಡಾವಣೆ, ಲಗ್ಗೆರೆ, ಬೆಂಗಳೂರು

Synopsys

ಡಾ. ಯು.ಎನ್. ಸಂಗನಾಳಮಠ ಅವರು ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಸಂಗ್ರಹಿಸಿದ ಕೃತಿ ಇದು. ಸ್ವಾಮಿ ವಿವೇಕಾನಂದರು ಭಾರತದ ನೈಜತೆಯನ್ನು ಬಲ್ಲವರು. ಭಾರತೀಯ ಸಂಸ್ಕೃತಿಯು ಇತರೆ ದೇಶಗಳ ಸಂಸ್ಕೃತಿಗಿಂತ ಹೇಗೆ ಭಿನ್ನ?, ಪಾಶ್ಚಾತ್ಯ ಸಂಸ್ಕೃತಿಯಿಂದ ಕಲಿಯಬೇಕಾದದ್ದು ಏನು? ಅನ್ಯ ಧರ್ಮೀಯ ತತ್ವಗಳು ಹಿಂದೂ ಧರ್ಮಕ್ಕೆ ಏಕೆ ಅಗತ್ಯ ? ಇಂತಹ ನೂರಾರು ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಬಲ್ಲವು. ದೈಹಿಕ ಶ್ರಮಿಲ್ಲದೇ ಇತರರನ್ನು ಶೋಷಿಸುವ ಹಿಂದೂ ಧರ್ಮದ ವಿರುದ್ಧವೂ ಅವರು ಬಿಚ್ಚುನುಡಿಗಳನ್ನು ಆಡಿದ್ದಾರೆ. ಸ್ವಾಮಿ ವಿವೇಕಾನಂದರ ವಿಚಾರಗಳು ಕ್ರಾಂತಿಕಾರಿಯೂ ಆಗಿವೆ. ಇಡೀ ಮನುಕುಲದ ಶಕ್ತಿಯಾಗಿವೆ ಎಂಬುದನ್ನು ತಿಳಿಸುವ ಉಪಯುಕ್ತ ಕೃತಿ ಇದು.

About the Author

ಯು. ಎನ್. ಸಂಗನಾಳಮಠ

ಸಾಹಿತಿ ಯು.ಎನ್. ಸಂಗನಾಳಮಠ 1949 ಅಕ್ಟೋಬರ್‌ 07 ಮೂಲತಃ ಧಾರವಾಡದವರು. ಸಿರಿಗನ್ನಡ ವೇದಿಕೆ ಅಧ್ಯಕ್ಷರಾಗಿದ್ದು ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಅನನ್ಯ, ಉದಯ ಕರ್ನಾಟಕ, ಧರ್ಮ ಸುಧಾ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಬರೆದ ಅನುಭವ. ಸುಮಾರು 40ಕ್ಕೂ ಹೆಚ್ಚು ಕೃತಿ ರಚಿಸಿದ್ದು ’ಕನ್ನಡ ಡಿಂಡಿಮ’ ಅವರ ಇತ್ತಿಚಿನ ಕೃತಿ. ಉಮೇಶ್‌ ಎಸ್. ಎನ್. ಅವರ ಕಾವ್ಯನಾಮ. ...

READ MORE

Related Books