ಶಿವಾಪುರ ಕಂಬಾರ ನಮಸ್ಕಾರ

Author : ಜಯಪ್ರಕಾಶ ಮಾವಿನಕುಳಿ

Pages 272

₹ 150.00




Year of Publication: 2004
Published by: ಚಂದ್ರಶೇಖರ ಕಂಬಾರ ಅಭಿನಂದನಾ ಸಮಿತಿ
Address: ಮೂಡಬಿದಿರೆ ದಕ್ಷಿಣ ಕನ್ನಡ ಜಿಲ್ಲೆ
Phone: 9448725065

Synopsys

‘ಶಿವಾಪುರ ಕಂಬಾರ ನಮಸ್ಕಾರ’ ಕೃತಿಯು ಜಯಪ್ರಕಾಶ ಮಾವಿನಕುಳಿ ಅವರ ಸಂಪಾದಿತ ಚಂದ್ರಶೇಖರ ಕಂಬಾರ ಕುರಿತ ಅಭಿನಂದನಾ ಗ್ರಂಥವಾಗಿದೆ. ಈ ಕೃತಿಯ ಪರಿವಿಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ದೇಸಿ ಕವಿಗೆ ‘ಪಂಪ’ ಸಮ್ಮಾನ - ಡಾ. ಕೃಷ್ಣಮೂರ್ತಿ ಹನೂರು, ಸಂಸ್ಕೃತಿ ಹರಿಕಾರ ಚಂದ್ರಶೇಖರ ಕಂಬಾರ-ಡಾ.ನಾಗವೇಣಿ ಎಚ್, ಕಿಂದರಿಜೋಹಗಿಯ ವೇಷ, ಆವೇಷ-ಡಾ. ಎಚ್.ಎಸ್. ವೆಂಕಟೇಶ ಮೂರ್ತಿ, ಜಾನಪದದ ಸಿರಿ ಚಂದ್ರಶೇಖರ ಕಂಬಾರ-ಡಾ. ಜಿ.ಆರ್. ತಿಪ್ಪೇಸ್ವಾಮಿ, ಕಾವ್ಯಕಿಂದರಿಜೋಗಿಗೆ ಪಂಪ ಪುರಸ್ಕಾರ- ನಿಂಗಪ್ಪ ಆರ್. ಠಕ್ಕಾಯಿ, ಅಪೂರ್ವ ಕವಿ, ನಾಟಕಕಾರ ಕಂಬಾರ- ಡಿ.ವಿ.ರಾಜಶೇಖರ, ದೇಶೀ ಸಂಸ್ಕೃತಿ ಕರ್ತಾರ, ಡಾ. ಕಂಬಾರರಿಗೆ ಡಬ್ಬಲ್ ಪ್ರಮೋಶನ್- ರಾ.ಬ. ಏಳುಕೋಟಿ, ಪಂಪ ಪ್ರಶಸ್ತಿ ಪಡೆದ ಡಾ. ಚಂದ್ರಶೇಖರ ಕಂಬಾರ- ಎನ್‌. ಆರ್. ರೂಪಶ್ರೀ, ಚಂದ್ರಶೇಖರ ಕಂಬಾರ ಹೇಳತಾರ ಕೇಳ.. ಬೇಳೂರು ಸುದರ್ಶನ, ಕಂಬಾರ: ಕಾಡು ಕುದುರೆಯೇರಿದ ಕಬೀರ- ಜಾನಕಿ, ಜಾನಪದ ಕೋಗಿಲೆಗೆ ಒಲಿದ ಕಬೀರ- ಗಂಗಾಧರ ಮೊದಲಿಯಾರ್, ಕಂಬಾರರ ನಾಟಕಗಳ ಜಾನಪದ ಸೊಗಡು- ಡಾ. ನಿಂಗಣ್ಣ ಸಣ್ಣಕ್ಕಿ ಕಂಬಾರ: ದಣಿವು ಕಾಣದ ಜೀವನೋತ್ಸಾಹ-ಶರತ್ ಕಲ್ಕೋಡ್, ಕಬ್ಬಿಣದ ಕಡಲೆಯನ್ನು ಹದ ಮಾಡಿದ ಕಂಬಾರ- ಚಿತ್ರಗುಪ್ತ, ಕಂಬಾರರಿಗೆ ಕಬೀರ್ ಸಮ್ಮಾನ್- ಪ್ರೊ. ಎಚ್.ಎಸ್. ಉಮೇಶ್, ಅರುವತ್ತರ ಹಾಡುಹಕ್ಕಿ- ಜಿ.ಎನ್. ರಂಗನಾಥ ರಾವ್, ಡಾ. ಚಂದ್ರಶೇಖರ ಕಂಬಾರರಿಗೆ ಅರುವತ್ತು-ಶಿಶಿರ, ಡಾಆ. ಚಂದ್ರಶೇಖರ ಕಂಬಾರ- ವ್ಯಕ್ತಿ ಚಿತ್ರ, ಸಮೃದ್ಧ ಕಂಬಾರ- ಡಾ. ರಾಜೀವ ತಾರನಾಥ, ಸಾಂಸ್ಕೃತಿಕ ವಿಸ್ಮೃತಿ ಮತ್ತು ಕಂಬಾರರ ಚಿಂತನೆಗಳು- ಡಾ. ವಿರೇಶ ಬಡಿಗೇರ, ನಿಷ್ಕಲ್ಮಶ ಹೃದಯವಂತ ಕಂಬಾರರು-ಬಿ.ಬಿ. ಶಿವಣ್ಣ ಮಂಗಳೂರು ಇಷ್ಟು ಭಾಗವು ಒಂದನೇಯ ಅಧ್ಯಾಯನದ ವಿಚಾರವನ್ನು ಒಳಗೊಂಡಿದೆ. ಎರಡನೇ ಅಧ್ಯಾಯನದಲ್ಲಿ ಸಂದರ್ಶನ ವಿಭಾಗವು ಒಳಗೊಂಡಿದ್ದು, ಜಾನಪದ ಸತ್ವದ ಜಾದೂಗಾರ ಕನ್ನಡದ ಕಂಬಾರ-ಜಿ.ಪಿ.ಬಸವರಾಜು, ನಾನಿನ್ನೂ ನನ್ನ ಮಹತ್ವದ ಕೃತಿ ಬರೆದಿಲ್ಲ- ಜಿ.ಎನ್. ರಂಗನಾಥ ರಾವ್, ಡಾ. ಚಂದ್ರಶೇಖರ ಕಂಬಾರ, ಶ್ರೀನಿವಾಸ ಪ್ರಭು, ರಷ್ಯಾಕ್ಕೆ ಹೋಗಿಬಂದ ಕಂಬಾರರೊಂದಿಗೆ- ಚಂದ್ರಶೇಖರ ಆಲೂರು, ಚಲನಚಿತ್ರ ಮಾಧ್ಯಮ: ಡಾ. ಚಂದ್ರಶೇಖರ ಕಂಬಾರರು ಏನು ಹೇಳುತ್ತಾರೆ- ಜಯಸಿಂಹ ಕೆಂಗೇರಿ, ನಾವು ಈಗ ಆ ಸ್ವರ್ಗವನ್ನು ಕಳೆದುಕೊಂಡಿದ್ದೇವೆ- ಪ್ರೊ. ಕೀರ್ತಿನಾಥ ಕುರ್ತಕೋಟಿ, ನಾನು ನವ್ಯಕ್ಕಿಂತ ನವ್ಯ-ಜೀಯಾರ್, ನಿರಾಶೆಯ ವಾತಾವರಣದ ನಡುವೆಯೇ ಉಲ್ಲಾಸದ ಭರವಸೆಯ ಬೀಜ ಬಿತ್ತುವ ಪ್ರಯತ್ನ ನನ್ನದು- ಡಿ.ವಿ. ರಾಜಶೇಖರ, ನಿಮ್ಮ ಮೇಲೆ ನಂಬಿಕೆಯಿರಲಿ, ನಿಮ್ಮ ಭಾಷೆಯ ಮೇಲೂ… ಜೋಗಿ ವಿಚಾರವನ್ನು ಒಳಗೊಂಡಿದೆ. ಮೂರನೇ ಸೊಲ್ಲಿನಲ್ಲಿ ಅವಲೋಕನ ವಿಭಾಗವು ಒಳಗೊಂಡಿದ್ದು, ಕರಿಮಾಯಿ: ಗ್ರಾಮೀಣ ಜೀವನದ ನಾಟಕೀಯ ಅಂಶಗಳು- ಡಾ. ಶಾಂತಿನಾಥ ದೇಸಾಯಿ, ಕಂಬಾರರ ಸಿಂಗಾರೆವ್ವ ಮತ್ತು ಅರಮನೆ- ಡಾ. ಜಯಪ್ರಕಾಶ ಮಾವಿನಕುಳಿ, ಸಿಂಗಾರೆವ್ವ ಮತ್ತು ಅರಮನೆ- ಡಾ. ಕಮಲಾ ಹಂಪನಾ, ಜೀಖೆ ಮಾಸ್ತರರ ಪ್ರಣಯ ಪ್ರಸಂಗ- ಪ್ರೊ. ಉದ್ಯಾವರ ಮಾಧವಾಚಾರ್ಯ, ಸಿರಿಸಂಪಿಗೆ- ಪ್ರೊ.ಟಿ. ಅಶೋಕ, ಬೆಳ್ಳಿಮೀನು- ಪ್ರೊ.ಜಿ.ಎಸ್.ಅಮೂರ, ಹುಲಿಯ ನೆರಳು-ಪ್ರೊ.ಬೋರಲಿಂಗಯ್ಯ, ಸಿರಿಸಂಪಿಗೆ- ಮಲ್ಲೇಪುರಂ ಜಿ. ವೆಂಕಟೇಶ, ಕರಿಮಾಯಿ: ಮರು ಓದು- ಪ್ರೊ.ಟಿ.ಪಿ ಅಶೋಕ, ಚಕೋರಿ- ಡಾ.ಎಚ್.ಎಸ್. ವೆಂಕಟೇಶಮೂರ್ತಿ, ಸಿರಿಸಂಪಿಗೆ- ಡಾ ದಿವಸದ್ಪತಿ ಹೆಗಡೆ.

About the Author

ಜಯಪ್ರಕಾಶ ಮಾವಿನಕುಳಿ
(05 May 1951)

ಸಾಹಿತಿ ಜಯಪ್ರಕಾಶ ಮಾವಿನಕುಳಿ ಅವರು ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯಿಕ ಕೃಷಿಯ ಜೊತೆಗೆ ನಾಟಕಕಾರರಾಗಿ, ರಂಗ ನಿರ್ದೇಶಕರಾಗಿ ಮತ್ತು ರಂಗಭೂಮಿ ಚಲನಚಿತ್ರ ನಟರಾಗಿಯೂ ಖ್ಯಾತಿ ಗಳಿಸಿದ್ದಾರೆ. ಕನ್ನಡ ಸಾಹಿತ್ಯಲೋಕಕ್ಕೆ ಹಲವು ನಾಟಕಗಳು, ಕಾದಂಬರಿ, ಸಣ್ಣಕತೆಗಳು, ಕಾವ್ಯ ಮತ್ತು ಇತರರೊಡನೆ ಹಲವು ಕೃತಿಗಳ ಸಂಪಾದನೆ ಸೇರಿದಂತೆ ಸುಮಾರು ಎಪ್ಪತ್ತು ಪುಸ್ತಕಗಳನ್ನು ನೀಡಿದ್ದಾರೆ. 1978ರಿಂದಲೂ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದು 4 ಕಥಾ ಸಂಕಲನಗಳು, 4 ಕವನ ಸಂಕಲನಗಳು, 7 ನಾಟಕಗಳು, 12 ಸಂಪಾದಿತ ಕೃತಿಗಳು ಹಾಗೂ ಇತರ ಕೃತಿಗಳೊಂದಿಗೆ 60ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. 'ಪೊಲಿಟಿಕ್ಸ್ ಆ್ಯಂಡ್ ಕಲ್ಚರ್' ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ. ...

READ MORE

Related Books