ಭಾರತೀಯ ನಾಟ್ಯ ಸಂಪ್ರದಾಯಗಳು ಮತ್ತು ಯಕ್ಷಗಾನ

Author : ಮನೋರಮಾ ಬಿ.ಎನ್

Pages 146

₹ 300.00




Year of Publication: 2021
Published by: ಕರ್ನಾಟಕ ಯಕ್ಷಗಾನ ಅಕಾಡೆಮಿ
Address: ಕನ್ನಡ ಭವನ, 2ನೇ ಮಹಡಿ, ಚಾಲುಕ್ಯ ವಿಭಾಗ ಜೆ.ಸಿ ರಸ್ತೆ, ಬೆಂಗಳೂರು- 560002
Phone: 0802213146

Synopsys

‘ಭಾರತೀಯ ನಾಟ್ಯ ಸಂಪ್ರದಾಯಗಳು ಮತ್ತು ಯಕ್ಷಗಾನ’ ಕೃತಿಯು ಮನೋರಮಾ ಬಿ.ಎನ್ ಅವರ ಸಂಪಾದಿತ ಪ್ರಬಂಧಗಳ ಸಂಕಲನವಾಗಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯು ನಡೆಸಿದ ರಾಜ್ಯಮಟ್ಟದ ಒಂದು ದಿನದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧಗಳ ಸಂಕಲನವಾಗಿದೆ. ಯಕ್ಷಗಾನವನ್ನು ಕೇಂದ್ರವಾಗಿಟ್ಟುಕೊಂಡು, ಅದು ಸೋದರ ಕಲೆಗಳಾದ ಭರತನಾಟ್ಯ -ಕೂಚಿಪುಡಿಗಳೊಂದಿಗೆ ಹೊಂದಿರುವ ಸಂಬಂಧವನ್ನು ಕುರಿತು ಚರ್ಚಿಸಲಾಗಿದೆ. ಕೇವಲ ಒಂದು ದಿನದ ಅವಧಿಯ ವಿಚಾರಗೋಷ್ಠಿಯಲ್ಲಿ ಮಂಡಿತವಾದ ಪ್ರಬಂಧಗಳ ಸಂಕಲನವಾದ್ದರಿಂದ ವಿಶೇಷ ವಿಸ್ತಾರವಿಲ್ಲ. ಆದರೆ, ಅಧ್ಯಯನಾಸಕ್ತರಿಗೆ ಆಹಾರ ಸಾಮಗ್ರಿಗಳು ಸಾಕಷ್ಟಿವೆ. ಆಯಾ ಕ್ಷೇತ್ರಗಳಲ್ಲಿ ಆಳವಾದ ಅಧ್ಯಯನ ನಡೆಸಿದ ಹಿರಿಯ ವಿದ್ವಾಂಸರ ಅತ್ಯಮೂಲ್ಯ ಚಿಂತನೆಗಳು ಇಲ್ಲಿದ್ದು, ಅಧ್ಯಯನಾಸಕ್ತರಿಗೆ ದಾರಿದೀಪಗಳಾಗಿವೆ. ಈ ಕೃತಿಯಲ್ಲಿ 2 ಭಾಗಗಳಿದ್ದು, ಭಾಗ-1ರಲ್ಲಿ ಆಲೋಕನ ; ಉದ್ಘಾಟಕರ ಭಾಷಣ, ಕಲೆಯ ಮೂಲ ಆಕೃತಿಯನ್ನು ಉಳಿಸಿಕೊಳ್ಳುವ ಕಾರ್ಯ(ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್), ಆಶಯ ಭಾಷಣ, ಅಭಿಜಾತ ನೃತ್ಯ ಮತ್ತು ಯಕ್ಷಗಾನ : ಒಂದು ವಿವೇಚನೆ- ಶತಾವಧಾನಿ ಡಾ. ಆರ್. ಗಣೇಸ್, ತೆಂಕುತಿಟ್ಟು ಆಂಗಿಕಾಭಿನಯಕ್ಕೆ ಭರತನಾಟ್ಯದ ಪ್ರಭಾವ : ಸಾಧ್ಯತೆ-ಬಾಧ್ಯತೆಗಳು(ಸೂರಿಕುಮೇರು ಕೆ. ಗೋವಿಂದ ಭಟ್), yakshagana and Bharata-Nritya : The Deshi-s towards Marga-Dr. Shobha Shashikumar, ಬಡಗು ಯಕ್ಷಗಾನ : ಉತ್ತರ ದಕ್ಷಿಣಾದಿ ಕಲೆಗಳ ಪ್ರಭಾವ ಮತ್ತು ಕೊರಿಯೋಗ್ರಫೀ ಪ್ರಯೋಗ(ಕೆರೆಮನೆ ಶಿವಾನಂದ ಹೆಗಡೆ), Introducing new kucipudi Movements Based on Yakshagana - Dr Veena Murthy Vijay, ಯಕ್ಷಗಾನದಲ್ಲಿ ಈವರೆಗಿನ ನಾಟ್ಯಶಾಸ್ತ್ರಾಧ್ಯಯನ-ಸಿಂಹಾವಲೋಕನ(ಪಾದೇಕಲ್ಲು ವಿಷ್ಣು ಭಟ್ಟ), ತೆಂಕುತಿಟ್ಟು ಯಕ್ಷಗಾನದ ಅಂಗಿಕಾಭಿನಯದ ಅನನ್ಯತೆ ಮತ್ತು ಹೊಸತನ(ಅಶೋಕ ಭಟ್ ಉಜಿರೆ), ಯಕ್ಷಗಾನ ಪದ್ಯದ ಛಂಧೋರಾಗ(ವಿದ್ವಾನ್ ಕೊರ್ಗಿ ಶಂಕರಾನಾಯಣ ಉಪಾಧ್ಯಾಯರು), ಕರ್ನಾಟಕದ ಪ್ರಾತಿನಿಧಿಕ ನೃತ್ಯಕಲೆಯನ್ನಾಗಿಸುವಲ್ಲಿ ಯಕ್ಷಗಾನದ ನಾಟ್ಯಶಾಸ್ತ್ರೀಯ ಮಜಲು (ಮಂಟಪ ಪ್ರಭಾಕರ ಉಪಾಧ್ಯ), ತುಲನ-ಅನುಸಂಧಾನ-ಸಮನ್ವಯ-ಅಧ್ಯಯನ (ಎಂ.ಪ್ರಭಾಕರ ಜೋಶಿ). ಭಾಗ-2 -ಸಂಕಥನದಲ್ಲಿ ಹೋಲಿಕೆಯ ಹದುಳ ( ದಿವಾಕರ ಹೆಗಡೆ), A Seminer with Par Excellence-Dr Dwaritha Viswanatha, A Good Move In Confluencing the Art Forms(Shalini vittal), ಅಧ್ಯಯನಭೂಯಿಷ್ಠವಾದ ವಿಚಾರಸಂಕಿರಣ(ಸಾವಿತ್ರಿ ಶಾಸ್ತ್ರಿ), Summary Of Shatavadhani Dr.R. Ganesh’s Talk and Yaksha-Bhaanika Review(Arjun Bharadwaj), ಸಾರ್ಥಕ ಪ್ರಯತ್ನ(ನಾಗರಂಜಿತ ಎಸ್.), Yaksha Bhaanika : Confluence of Two Forms- Theoretical Analysis(Arun Sreenivasan), ಲಕ್ಷ್ಯಕ್ಕೆ ಲಕ್ಷಣವನ್ನಿತ್ತ ವಿಚಾರಸಂಕಿರಣ (ಅನಂತ ಪದ್ಮನಾಭ ಪಾಟಕ್), ಸ್ಮರಣೆಯಲ್ಲುಳಿಯುವ ಕಾರ್ಯಕ್ರಮ (ವಿದ್ವಾನ್ ಎಚ್.ಎಸ್. ವೇಣು ಗೋಪಾಲ್), ಊರ್ಧ್ವಪಾತದ ವ್ಯಂಜನಾವ್ಯಾಪಾರ (ಕೃಷ್ಣಪ್ರಕಾಶ ಉಳಿತ್ತಾಯ), ‘ಲೇಖಕರ ವಿಳಾಸ’ ಹಾಗೂ ‘ನಮ್ಮ ಪ್ರಕಣೆಗಳು’ ಕೂಡಾ ಈ ಕೃತಿಯಲ್ಲಿದೆ.

About the Author

ಮನೋರಮಾ ಬಿ.ಎನ್

ಮನೋರಮಾ ಬಿ.ಎನ್ ಅವರು ಮೂಲತಃ ಮಡಿಕೇರಿಯವರು.ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಹಾಗೂ ಭರತನಾಟ್ಯ,-ಈ ಎರಡರಲ್ಲೂ ಸ್ನಾತಕೋತ್ತರ ಪದವೀಧರರು. ಭರತನಾಟ್ಯದ ಸಾಮಾಜಿಕ ಸಂವಹನಗಳ ಕುರಿತು ಸಂಶೋಧನಾ ವಿದ್ಯಾರ್ಥಿ. ‘ನೂಪುರ ಭ್ರಾಮರಿ’ ಪ್ರತಿಷ್ಠಾನದ ಅಧ್ಯಕ್ಷೆಯಾಗಿದ್ದಾರೆ.  ಕೃತಿಗಳು : ಭಾರತೀಯ ನಾಟ್ಯ ಸಂಪ್ರದಾಯಗಳು ಮತ್ತು ಯಕ್ಷಗಾನ, ಮಹಾಮುನಿ ಭರತ, ಮಾರ್ಗ ಮುಕುರ. ...

READ MORE

Related Books