ತಾವು ಬರೆಯುವುದಕ್ಕಿಂತಲೂ ಯುವಕರನ್ನು ಪ್ರೋತ್ಸಾಹಿಸಿ ಬೆಳೆಸುವುದಕ್ಕೆ ಹೆಚ್ಚು ಗಮನ ಕೊಟ್ಟಿದ್ದವರು ಚಿ. ಶ್ರೀನಿವಾಸರಾಜು ಅವರು. ಅದರ ನಡುವೆಯೂ ಹಲವಾರು ಮಹತ್ವದ ಕೃತಿಗಳ ಮೂಲಕ ಅವರು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಅವರು ಸಂಪಾದಿಸಿದ ಈ ಕೃತಿ ಕೈಲಾಸಂ ನೆನಪಿನ ಸಂಪುಟ ಒಂದು ಮಹತ್ವದ ಆಕರವಾಗಿ, ಕೈಲಾಸಂ ಬಗ್ಗೆ ಅಧ್ಯಯನ ಮಾಡಬಲ್ಲವರಿಗೆ, ಕುತೂಹಲಿಗಳಿಗೆ ನೆರವಾಗುವಂತಿದೆ. ಇದರಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ಕೈಲಾಸಂ ಜೀವನ ಹಾಗೂ ವ್ಯಕ್ತಿತ್ವವನ್ನು ಕಟ್ಟಿಕೊಡುವ ಬರಹಗಳಿವೆ. ಎರಡನೆಯ ಭಾಗವು ಅವರ ನಾಟಕಗಳಿಗೆ ಸಂಬಂಧಿಸಿದ್ಧಾಗಿದೆ. 2000ನೇ ಇಸವಿಯಲ್ಲಿ ಮೊದಲ ಮುದ್ರಣ ಕಂಡಿದ್ದ ಈ ಕೃತಿಯ ಎರಡನೇ ಮುದ್ರಣ 2003ರಲ್ಲಿ ಬಂದಿದೆ.
ಕನ್ನಡಕ್ಕಾಗಿ ಶ್ರಮಿಸಿದ, ಯುವ ಪ್ರತಿಭೆಗಳ ಪಡೆಯನ್ನೇ ಸೃಷ್ಟಿಸಿ ಕನ್ನಡದ ಕಂಪು ಹೊಸ ತಲೆಮಾರಿಗೂ ತಲುಪುವಂತೆ ದುಡಿದ ಸಾಹಿತಿ ಚಿ. ಶ್ರೀನಿವಾಸರಾಜು. ಮೇಷ್ಟ್ರು ಎಂದೇ ಖ್ಯಾತರು. ಚಿಕ್ಕಬಳ್ಳಾಪುರದಲ್ಲಿ ಜನಿಸಿದರು. ತಂದೆ ವಿ. ಚಿಕ್ಕರಾಜು, ತಾಯಿ- ಸಾವಿತ್ರಮ್ಮ. ಆರಂಭಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲಿಯೇ ಪಡೆದು, ಹೈಸ್ಕೂಲು ಓದುವಾಗ ‘ಶಾಲು ಜೋಡಿಗಳು’ ಎಂಬ ನಾಟಕ ರಚಿಸಿದ್ದರು. ಆನಂತರದಲ್ಲಿ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬಿ.ಎಸ್ಸಿ. ಓದಿದ್ದು, ಕೆಲಕಾಲ ಲೋಹ ವಿಕಾಸ ಮಂಡಲಿಯಲ್ಲಿ ಸಾರಿಗೆ ಅಧಿಕಾರಿಯಾಗಿದ್ದರು. ‘ಛಸನಾಲ ಬಂಧು’ ಕವನ ಸಂಕಲನ ಪ್ರಕಟಿಸಿದ್ದರು. ಮತ್ತೆ ಓದುವ ಹಂಬಲದಿಂದ ಬಿ.ಎ, ಎಂ.ಎ. ಪದವಿ ಪಡೆದು, ಇಂಡಾಲಜಿಯಲ್ಲಿ ಡಿಪ್ಲೊಮಾ ಪದವಿ ಪಡೆದರು. ಸೆಂಟ್ರಲ್ ಕಾಲೇಜಿನ ಕನ್ನಡ ...
READ MORE